ಕೆಚಪ್ ಎಂದರೆ ಬಹಳಷ್ಟು ಜನರಿಗೆ ಇಷ್ಟ. ಯಾವ ಆಹಾರಗಳಲ್ಲಿ ಇದನ್ನು ಸೇರಿಸಿ ತಿನ್ನಬಹುದು ಎಂಬುದನ್ನ ಕಾಯುತ್ತಾರೆ. ಆದರೆ ಇದರ ಅಡ್ಡ ಪರಿಣಾಮಗಳನ್ನು ಮಾತ್ರ ಇವರು ಹೆಚ್ಚಾಗಿ ನಿರ್ಲಕ್ಷಿಸುತ್ತಾರೆ. ಸಮೋಸಾ, ಮಿರ್ಚಿ, ಪಕೋಡಾದಂತಹ ಆಹಾರ ಪದಾರ್ಥಗಳ ಜೊತೆ ಇದು ಹೊಂದಿಕೆಯಾಗುತ್ತದೆ ಅಲ್ಲದೇ ಇದು ಆಹಾರಗಳ ರುಚಿಯನ್ನು ಹೆಚ್ಚಿಸುತ್ತದೆ.
ಈ ಕಾರಣದಿಂದಾಗಿ, ನಮ್ಮಲ್ಲಿ ಹೆಚ್ಚಿನವರು ಟೊಮೆಟೋ ಕೆಚಪ್ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂದು ತಿಳಿದಿದ್ದಾರೆ. ಆದರೆ ಈ ಸಾಸ್ಗಳು ಹಲವು ಹಾನಿಕಾರಕ ರಾಸಾಯನಿಕಗಳಿಂದ ಕೂಡಿರುತ್ತದೆ ಎಂಬುದನ್ನ ಮರೆಯುತ್ತಾರೆ.
ಟೊಮೆಟೋ ಸಾಸ್ ಅನ್ನು ದೀರ್ಘಕಾಲದವರೆಗೆ ಅತಿಯಾಗಿ ಬಳಸುವುದರಿಂದ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಇದು ಮಧುಮೇಹ ಮತ್ತು ದೇಹದಲ್ಲಿ ಬೊಜ್ಜು ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ. ಟೊಮೆಟೋಗಳಲ್ಲಿ ಹಿಸ್ಟಮೈನ್ ಕೂಡ ಸಮೃದ್ಧವಾಗಿದೆ. ಇದು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುತ್ತದೆ. ಆದರೆ ಹೆಚ್ಚು ಹಿಸ್ಟಮೈನ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ದದ್ದುಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಇದು ಅಲರ್ಜಿಯನ್ನು ಉಂಟುಮಾಡುತ್ತದೆ. ಅಲರ್ಜಿ ಹೊಂದಿರುವ ಜನರು ಹೆಚ್ಚಿನ ಸೀನು, ನಾಲಿಗೆ, ಬಾಯಿ ಮತ್ತು ಮುಖದ ಊತ ಮುಂತಾದ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಅಲ್ಲದೆ. ಅವರು ಗಂಟಲು ಕಿರಿಕಿರಿ ಮತ್ತು ಉಸಿರಾಟದ ತೊಂದರೆಗಳನ್ನು ಅನುಭವಿಸುವ ಪರಿಸ್ಥಿತಿ ಬರುತ್ತದೆ.
ಅತಿಯಾದ ಟೊಮೆಟೋಗಳನ್ನು ಸೇವಿಸುವುದರಿಂದ ಊತ ಮತ್ತು ಕೀಲು ನೋವುಗಳು ಕಾಣಿಸಿಕೊಳ್ಳುತ್ತದೆ. ಈ ಹಣ್ಣಿನಲ್ಲಿ ಸೋಲನೈನ್ ಸಮೃದ್ಧವಾಗಿದೆ. ಇದು ಅಂಗಾಂಶಗಳಲ್ಲಿ ಕ್ಯಾಲ್ಸಿಯಂ ಹೆಚ್ಚಿಸಲು ಸಹಾಯ ಮಾಡುತ್ತದೆ, ಆದರೆ ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದು ಉರಿಯೂತ ಮತ್ತು ದೇಹದ ವಿವಿಧ ಭಾಗಗಳಲ್ಲಿ ನೋವನ್ನು ಉಂಟುಮಾಡುತ್ತದೆ.
ನೀವು ಸಾಮಾನ್ಯವಾಗಿ ಗಮನಿಸಿ ನೋಡಿ ಕೆಚಪ್ನ ಬಾಟಲ್ಗಳ ಮೇಲೆ ಟೊಮ್ಯಾಟೋ ಚಿತ್ರವನ್ನು ಮುದ್ರಿಸಲಾಗುತ್ತದೆ. ಇದರ ಅರ್ಥ ಹೆಚ್ಚು ಚೆನ್ನಾಗಿ ಹಣ್ಣಾಗಿರುವ ಟೊಮ್ಯಾಟೋಗಳನ್ನು ಬಳಸಿ ಸಾಸ್ ತಯಾರಿಸಲಾಗಿದೆ ಎಂದಲ್ಲ. ಒಂದು ಆಘಾತಕಾರಿ ಅಂಶವೆಂದರೆ ಸಾಸ್ ತಯಾರಿಸುವಾಗ ಟೊಮ್ಯಾಟೋ ಹಣ್ಣನ್ನು ಕಡಿಮೆ ಪ್ರಮಾಣದಲ್ಲಿ ಬಳಸಲಾಗುತ್ತದೆ. ಟೊಮ್ಯಾಟೋ ಸಿಪ್ಪೆ ಮತ್ತು ಬೀಜಗಳನ್ನು ಹೆಚ್ಚಾಗಿ ಬಳಸಲಾಗುವುದು. ಅವುಗಳನ್ನು ಹೆಚ್ಚು ಶಾಖದಲ್ಲಿ ದೀರ್ಘ ಸಮಯಗಳ ಕಾಲ ಬೇಯಿಸಲಾಗುತ್ತದೆ.
ಇನ್ನು ಸಾಸ್ನಲ್ಲಿ ಅಧಿಕ ಪ್ರಮಾಣದ ಉಪ್ಪನ್ನು ಬಳಕೆ ಮಾಡಲಾಗುತ್ತದೆ. ಏಕೆಂದರೆ ಉಪ್ಪು ಹೆಚ್ಚುವರಿ ರುಚಿಯನ್ನು ನೀಡುತ್ತದೆ. ಇಂತಹ ಅತಿಯಾದ ಉಪ್ಪಿನಂಶ ಹೊಂದಿರುವ ಆಹಾರವನ್ನು ಸೇವಿಸುವುದರಿಂದ ರಕ್ತ ಹಾಗೂ ಹೃದಯದ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ.
ಅತಿಸಾರ
ಟೊಮೆಟೋಗಳು ಸಾಲ್ಮೊನೆಲ್ಲಾ ಎಂಬ ಮಾಲಿನ್ಯಕ್ಕೆ ಒಳಗಾಗುತ್ತವೆ, ಇದು ಅತಿಸಾರಕ್ಕೆ ಕಾರಣವಾಗುತ್ತದೆ. ಟೊಮೆಟೋ ಸಾಸ್ ಹೆಚ್ಚು ಸೂಕ್ಷ್ಮವಿರುವ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದು ಜೀರ್ಣಕ್ರಿಯೆ ಸಮಸ್ಯೆಯನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ವರದಿ ಮಾಡಿವೆ.
ಮೂತ್ರಪಿಂಡದಲ್ಲಿ ಕಲ್ಲು
ಟೊಮೆಟೋ ಸಾಸ್ಗಳನ್ನು ಅತಿಯಾಗಿ ತಿನ್ನುವುದರಿಂದ ಮೂತ್ರಪಿಂಡದ ಕಲ್ಲುಗಳು ಉಂಟಾಗಬಹುದು ಎಂದು ಅಧ್ಯಯನಗಳು ಹೇಳುತ್ತವೆ. ಹಣ್ಣಿನಲ್ಲಿ ಆಕ್ಸಲೇಟ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿರುವುದರಿಂದ, ನೀವು ಈ ಪೋಷಕಾಂಶಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಅದು ದೇಹದಲ್ಲಿ ಸಂಗ್ರಹವಾಗುತ್ತವೆ ಮತ್ತು ಮೂತ್ರಪಿಂಡದ ಕಲ್ಲುಗಳು ಉಂಟಾಗಲು ಕಾರಣವಾಗುತ್ತದೆ.
ಟೊಮೊಟೋ ಹೆಚ್ಚು ಸೇವನೆ ಮಾಡುವ ಮುನ್ನ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅಲ್ಲದೇ ಸಾಸ್ ಖರೀದಿ ಮಾಡುವಾಗ ಸಹ ಎಚ್ಚರಿಕೆಯಿಂದ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಸಾಸ್ಗೆ ಹೆಚ್ಚು ಬೇಡಿಕೆ ಇರುವ ಕಾರಣ ವಿವಿಧ ರೂಪದಲ್ಲಿ ತಯಾರಿಸುತ್ತಿದ್ದಾರೆ. ಉತ್ತಮ ಸಂಸ್ಥೆಯ ಸಾಸ್ ಬಳಕೆ ಮಾಡಿ. ಸಾಸ್ನಲ್ಲಿ ಎಷ್ಟೆಷ್ಟು ಪ್ರಮಾಣದಲ್ಲಿ ಉಪ್ಪು, ಸಕ್ಕರೆ, ಟೊಮ್ಯಾಟೋ, ಸಂರಕ್ಷಣಾ ಪದಾರ್ಥಗಳನ್ನು ಬಳಸಿದ್ದಾರೆ ಎನ್ನುವುದನ್ನು ಪರಿಶೀಲಿಸಿ ನಂತರ ಖರೀದಿ ಮಾಡುವುದು ಉತ್ತಮ.