Webdunia - Bharat's app for daily news and videos

Install App

ಬೇಸಿಗೆಯಲ್ಲಿ ತಾಟಿನುಂಗು ತಿನ್ನುತ್ತಿದ್ದೀರಾ? ಬಹಳಷ್ಟು ಪ್ರಯೋಜನಗಳಿವೆ ತಿಳಿದಿದೆಯೆ?

Webdunia
ಶುಕ್ರವಾರ, 15 ಮಾರ್ಚ್ 2019 (16:07 IST)
ಬೇಸಿಗೆಯಲ್ಲಿ ಮಾತ್ರ ಲಭ್ಯವಿರುವ ತಾಟಿನುಂಗುವಿನಲ್ಲಿ ಅನೇಕ ಪ್ರಯೋಜನಗಳು ಇವೆಯೆಂದು ನಿಮಗೆ ತಿಳಿದಿದೆಯೆ? ಆರು ಬಾಳೆಹಣ್ಣಿನಲ್ಲಿರುವ ಪೋಟಾಷಿಯಂ ಒಂದು ತಾಟಿನುಂಗುನಲ್ಲಿ ಇರುತ್ತದೆಂದರೆ ನಂಬುತ್ತೀರಾ? ಹೌದ್ರಿ... ಇದನ್ನು ಐಸ್ ಆಪಲ್ ಅಂತಲೂ ಕರೆಯುತ್ತಾರೆ. ಪ್ರಕೃತಿಯ ಕೊಡುಗೆಯಾದ ತಾಟಿನುಂಗು.
ಈ ತಾಟಿನುಂಗುನಲ್ಲಿ ಅದ್ಭುತ ಔಷಧ ಗುಣಗಳು ಇರುವುದರಿಂದ ಸಾಧ್ಯವಾದರೆ ಇದನ್ನು ಪ್ರತಿದಿನ ಸೇವಿಸಲು ಪ್ರಯತ್ನಿಸಿ. 
ತಾಟಿನುಂಗುವಿನ ಪ್ರಯೋಜನಗಳೇನೆಂದು ನೋಡೋಣ.
 
ತಾಟಿ ನುಂಗು ಶರೀರದಲ್ಲಿರುವ ಅಧಿಕ ಕೊಲೆಸ್ಟ್ರಾಲ್ ಅನ್ನು ಕಡಿಮೆಮಾಡುತ್ತದೆ.
ತಾಟಿನುಂಗುವಿನಲ್ಲಿರುವ ಕ್ಯಾಲ್ಸಿಯಂ ಮೂಳೆಗಳಿಗೆ ಬಲವನ್ನು ನೀಡುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಇದರಲ್ಲಿರುವ ಎ,ಬಿ,ಸಿ ವಿಟಮಿನ್‌ಗಳು, ಐರನ್, ಜಿಂಕ್, ಫಾಸ್ಪರಸ್, ಪೋಟಾಷಿಯಂ ನಂತಹ ಪೋಷಕಾಂಶಗಳು ಆರೋಗ್ಯವನ್ನು ವೃದ್ಧಿಸುತ್ತದೆ.
ಹೃದಯ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವವರಿಗೆ, ಮಧುಮೇಹ ರೋಗಿಗಳಿಗೆ ಒಳ್ಳೆಯದು.
ಯಕೃತ್ತಿನ ಸಮಸ್ಯೆಯಿಂದ ಹೋರಾಡುತ್ತಿರುವರು ಇದನ್ನು ಸೇವಿಸಿದರೆ ಉತ್ತಮ.
ಮೊಡವೆಗಳಿದ್ದರೆ, ತಾಟಿನುಂಗು ಪ್ರತಿದಿನ ಸೇವಿಸಿದರೆ ಕಡಿಮೆಯಾಗುತ್ತದೆ
ಬೇಸಿಗೆಯಲ್ಲಿ ದೇಹದಲ್ಲಿನ ಗ್ಲೂಕೋಸ್ ಅಂಶದ ಏರುಪೇರುಗಳನ್ನು ನಿಯಂತ್ರಿಸುತ್ತದೆ.
ತಾಟಿನುಂಗುವಿನಲ್ಲಿರುವ ಪೋಟಾಷಿಯಂ ದೇಹದಲ್ಲಿರುವ ವಿಷಪದಾರ್ಥಗಳನ್ನು ತೊಲಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.
ಉರಿಬಿಸಿಲಿನ ಕಾರಣದಿಂದ ದೇಹದಲ್ಲಿ ಡಿಹೈಡ್ರೇಶನ್ ಉಂಟಾದರೆ, ಆ ಸಮಯದಲ್ಲಿ ತಾಟಿನುಂಗು ಸೇವಿಸಿದರೆ ಉಪಶಮನವಾಗುತ್ತದೆ.
ದೇಹದಲ್ಲಿ ಕ್ಯಾನ್ಸರ್ ಕಣಗಳನ್ನು ತಡೆಯಲು ತಾಟಿನುಂಗು ಸಹಾಯಕವಾಗಿದೆ. ಟ್ಯೂಮರ್, ಬ್ರೆಸ್ಟ್ ಕ್ಯಾನ್ಸರ್ ಕಣಗಳನ್ನು ವೃದ್ದಿಸುವ ಪೆಟ್ರೋ ಕೆಮಿಕಲ್ಸ್ ಆಂಥೋಸೈನಿನ್ ನಂತಹವುಗಳನ್ನು ನಾಶಮಾಡುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments