ಬೆಂಗಳೂರು: ಪೋರ್ನ್ ಸಿನಿಮಾ ನೋಡುವುದು ಇಂದಿನ ಯುವ ಜನಾಂಗಕ್ಕೆ ಚಾಳಿಯಾಗಿಬಿಟ್ಟಿದೆ. ಇದು ಅವರ ಮುಂದಿನ ಲೈಂಗಿಕ ಜೀವನಕ್ಕೆ ಎಷ್ಟು ಅಪಾಯಕಾರಿ ಎಂಬುದು ಅವರಿಗೆ ಅರಿವಿರುವುದಿಲ್ಲ.
ಆರೋಗ್ಯ ತಜ್ಞರ ಪ್ರಕಾರ, ಪೋರ್ನ್ ಸಿನಿಮಾ ನೋಡುವ ಮಂದಿಗೆ ಮುಂದೆ ಲೈಂಗಿಕ ಸಮಸ್ಯೆಗಳು, ಲೈಂಗಿಕ ನಿರಾಸಕ್ತಿ ಕಾಡುವ ಅಪಾಯವಿದೆಯಂತೆ.
ಬೋಸ್ಟನ್ ನ ವಿವಿಯೊಂದು ಈ ಬಗ್ಗೆ ಅಧ್ಯಯನ ನಡೆಸಿದ್ದು, ಪೋರ್ನ್ ಸಿನಿಮಾ ನೋಡುವ ಯುವ ಜನಾಂಗದ ಮೇಲೆ ಸಮೀಕ್ಷೆ ನಡೆಸಿದೆ. ಪೋರ್ನ್ ಸಿನಿಮಾ ನೋಡುವವರಲ್ಲಿ ಸೆಕ್ಸ್ ಬಗ್ಗೆ ಅತಿಯಾದ ನಿರೀಕ್ಷೆಗಳಿರುತ್ತವೆ. ಈ ಅತಿಯಾದ ನಿರೀಕ್ಷೆಗಳು ರಿಯಲ್ ಸೆಕ್ಸ್ ಸಂಬಂಧದ ಸಂದರ್ಭದಲ್ಲಿ ಈಡೇರದೇ ಇದ್ದಾಗ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತವೆ ಎಂದು ಅಧ್ಯಯನಕಾರರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.