Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸತತ 8ನೇ ಬಾರಿಯೂ ರೆಪೊ ದರದಲ್ಲಿ ಬದಲಿಲ್ಲ: ಆರ್‌ಬಿಐ

ಸತತ 8ನೇ ಬಾರಿಯೂ ರೆಪೊ ದರದಲ್ಲಿ ಬದಲಿಲ್ಲ: ಆರ್‌ಬಿಐ
ಮುಂಬೈ , ಶುಕ್ರವಾರ, 8 ಅಕ್ಟೋಬರ್ 2021 (13:12 IST)
ಮುಂಬೈ : ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್‌ಬಿಐ) ಸತತ 8ನೇ ಬಾರಿಯೂ ರೆಪೊ ದರ ಶೇ 4ರಲ್ಲಿ ಬದಲಾವಣೆ ಮಾಡದಿರಲು ನಿರ್ಧರಿಸಿದೆ. ದೇಶದ ಆರ್ಥಿಕತೆಯು ಇದೀಗ ಚೇತರಿಕೆಯ ಲಕ್ಷಣಗಳನ್ನು ತೋರುತ್ತಿದ್ದರೂ ರೆಪೊ ದರದಲ್ಲಿ ಬದಲಾವಣೆ ಮಾಡದಿರಲು ಆರ್ಬಿಐ ತೀರ್ಮಾನಿಸಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಸತತ ಎಂಟನೇ ಬಾರಿ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಆರ್‌ಬಿಐ 2020ರ ಮೇ 22ರಂದು ಕೊನೆಯ ಬಾರಿಗೆ ದರವನ್ನು ಪರಿಷ್ಕರಿಸಿತ್ತು. ಇದರಿಂದ ಬಡ್ಡಿದರ ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಇಳಿದಿತ್ತು.
ದ್ವೈ-ಮಾಸಿಕ ವಿತ್ತೀಯ ನೀತಿ ಪರಿಶೀಲನೆಯನ್ನು ಪ್ರಕಟಿಸುವ ವೇಳೆ ಶಕ್ತಿಕಾಂತ ದಾಸ್ ಅವರು ಈ ಮಾಹಿತಿ ನೀಡಿದ್ದಾರೆ. ಇದರ ಪರಿಣಾಮವಾಗಿ, ರಿವರ್ಸ್ ರೆಪೊ ದರದಲ್ಲೂ ಬದಲಾವಣೆ ಇರುವುದಿಲ್ಲ. ಆರ್‌ಬಿಐ ನಲ್ಲಿ ಇಟ್ಟಿರುವ ಠೇವಣಿಗಳಿಗಾಗಿ ಬ್ಯಾಂಕುಗಳಿಗೆ ಶೇ 3.35ರಷ್ಟು ಬಡ್ಡಿ ಮುಂದುವರಿಯುತ್ತದೆ.
ಬಡ್ಡಿದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ಎಂಪಿಸಿ ಸರ್ವಾನುಮತದಿಂದ ಒಪ್ಪಿಗೆ ನೀಡಿದೆ. ಹಣದುಬ್ಬರವನ್ನು ನಿರ್ದಿಷ್ಟ ಗುರಿಯೊಳಗೆ ಉಳಿಸಿಕೊಳ್ಳಲು ಅಗತ್ಯವಿದ್ದಷ್ಟು ಕಾಲ ತನ್ನ ಹೊಂದಾಣಿಕೆಯ ನಿಲುವನ್ನು ಮುಂದುವರಿಸಲು ನಿರ್ಧರಿಸಿರುವುದಾಗಿ ದಾಸ್ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ನಾಯಕರ ಕಾರು ಬಂದಾಗ ಎಚ್ಚರವಾಗಿರಿ : ಡಿ.ಕೆ.ಶಿವಕುಮಾರ್