ಕೇರಳ : ಕೋವಿಡ್ ಎರಡನೇ ಅಲೆಯಿಂದ ತತ್ತರಿಸಿರುವ ಈ ಸಂದರ್ಭದಲ್ಲಿ ಕೇರಳದಲ್ಲಿ ಜಿಕಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಮತ್ತಷ್ಟು ಆತಂಕ ಮೂಡಿಸಿದೆ. ಕೇರಳದ ತಿರುವನಂತಪುರ ಜಿಲ್ಲೆಯಲ್ಲಿ ಗುರುವಾರ 13 ಜಿಕಾ ವೈರಸ್ ಪ್ರಕರಣಗಳು ಕಂಡು ಬಂದಿದೆ. ಸೋಂಕು ಪತ್ತೆಯಾದವರ ಸ್ಯಾಂಪಲ್ ಅನ್ನು ಪುಣೆಯ ವೈರಲಾಜಿ ವಿಭಾಗಕ್ಕೆ ಕಳುಹಿಸಲಾಗಿದ್ದು, ಅಲ್ಲಿ ಕೂಡ ಇದು ಜಿಕಾ ವೈರಸ್ ಸೋಂಕು ಹರಡಿರುವುದು ಸ್ಪಷ್ಟವಾಗಿದೆ. ಈ ಕುರಿತು ಮಾತನಾಡಿರುವ ಕೇರಳ ಆರೋಗ್ಯ ಸಚಿವರಾದ ವೀಣಾ ಜಾರ್ಜ್, 13 ಪ್ರಕರಣಗಳ ಬಗ್ಗೆ ಅನುಮಾನ ವ್ಯಕ್ತವಾಗಿ ಪುಣೆಯ ರಾಷ್ಟ್ರೀಯ ವೈರಲಾಜಿ ಸಂಸ್ಥೆಗೆ ಕಳುಹಿಸಿದ್ದೇವು.
ಇದು ಜಿಕಾ ವೈರಸ್ ಸೋಂಕು ಎಂದು ವರದಿ ಬಂದಿದೆ ಎಂದಿದ್ದಾರೆ. ಇನ್ನು ಪತ್ತೆಯಾದ ಎಲ್ಲಾ ಪ್ರಕರಣಗಳು ತಿರುವನಂತರಪುರದಿಂದಲೇ ದಾಖಲಾಗಿದೆ ಎನ್ನಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಿಕಾ ವೈರಸ್ ಸೋಂಕು ಏಡೆಸ್ ಸೊಳ್ಳೆಯಿಂದ ಹಬ್ಬುತ್ತದೆ. ಬೆಳಗ್ಗಿನ ಹೊತ್ತು ಈ ಸೊಳ್ಳೆಗಳು ಹೆಚ್ಚು ಕ್ರಿಯಾಶೀಲವಾಗಿರುತ್ತದೆ. ಮೊದಲ ಜಿಕಾ ವೈರಸ್ ಪ್ರಕರಣ 1947ರಲ್ಲಿ ಉಗಾಂಡಾದ ಕೋತಿಗಳಲ್ಲಿ ಕಂಡು ಬಂದಿತ್ತು. ಇದಾದ ಬಳಿಕ 1952 ರಲ್ಲಿ ಉಗಾಂಡಾ ಮತ್ತು ಯುನೈಟೆಡ್ ರಿಪಬ್ಲಿಕ್ ಆಫ್ ಟಾಂಜಾನಿಯಾದಲ್ಲಿ ಮನುಷ್ಯರಲ್ಲಿ ಕಂಡು ಬಂದಿತ್ತು. ಏಷ್ಯಾ, ಆಫ್ರಿಕಾ, ಅಮೆರಿಕ ಮತ್ತು ಪೆಸಿಫಿಕ್ ದ್ವೀಪಗಳಲ್ಲಿ ಜಿಕಾ ವೈರಸ್ ಹರಡಿರುವುದು ಪತ್ತೆಯಾಗಿದೆ.