ಬೆಂಗಳೂರು : ಮಹಾಮಾರಿ ಕೊರೊನಾ ತನ್ನ ರೂಪ ಬದಲಿಸಿ ಮತ್ತೆ ಬೇಟೆ ಶುರು ಮಾಡಿದೆ.
ರಾಜ್ಯದಲ್ಲಿ ಆತಂಕ ಸೃಷ್ಟಿಸಿದೆ. ದಕ್ಷಿಣ ಆಫ್ರಿಕಾದ ಒಮಿಕ್ರಾನ್ ಇನ್ನಿಲ್ಲದ ಟೆನ್ಷನ್ ತಂದಿಟ್ಟಿದೆ. ಹೀಗಾಗೇ ರಾಜ್ಯದಲ್ಲಿ ಸರ್ಕಾರ ಈಗ ಕಠಿಣ ರೂಲ್ಸ್ ಜಾರಿಗೆ ತರೋಕೆ ಮುಂದಾಗಿದೆ. ಇಷ್ಟೇ ಅಲ್ಲ, ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆಯೂ ಫುಲ್ ಅಲರ್ಟ್ ಆಗಿದೆ.
ರೂಪಾಂತರಿ ವೈರಸ್ನನ್ನ ಪ್ರಾರಂಭದಲ್ಲಿ ಮಟ್ಟ ಹಾಕೋಕೆ ತಯಾರಿ ನಡೆಸ್ತಿದೆ. ಸದ್ಯ ಈಗ ಮನೆ ಮನೆಗೆ ತೆರಳಿ ಲಸಿಕೆ ಹಾಕಲು ಬಿಬಿಎಂಪಿ ಮುಂದಾಗಿದೆ.
ಕೊವಿಡ್ ಲಸಿಕೆ ಪಡೆಯುವುದಕ್ಕೆ ಜನರು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಜನರ ಬಳಿಯೇ ತೆರಳಿ ಲಸಿಕೆ ಹಾಕಲು ಬಿಬಿಎಂಪಿ ನಿರ್ಧರಿಸಿದೆ. ಕಡ್ಡಾಯವಾಗಿ 2 ಡೋಸ್ ಲಸಿಕೆ ಹಾಕಲು ಃಃಒP ಪ್ಲ್ಯಾನ್ ಮಾಡಿಕೊಂಡಿದೆ. ಬೆಂಗಳೂರಿನ ಪ್ರತಿ ಗಲ್ಲಿ, ಮನೆಗೆ ಬಿಬಿಎಂಪಿ ಸಿಬ್ಬಂದಿ ಭೇಟಿ ನೀಡಿ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಲಿದ್ದಾರೆ. ಇದೇ ವೇಳೆ ಃಃಒP ಆರೋಗ್ಯ ಸಿಬ್ಬಂದಿ ಲಸಿಕೆ ನೀಡಲಿದ್ದಾರೆ.
ಬೆಂಗಳೂರಲ್ಲಿ 80 ಲಕ್ಷ ಜನರಿಗೆ ಫಸ್ಟ್ ಡೋಸ್ ಲಸಿಕೆ ನೀಡಲಾಗಿದೆ. ಈ ಪೈಕಿ 55.70 ಲಕ್ಷ ಜನರು 2ನೇ ಡೋಸ್ ಪಡೆದಿದ್ದಾರೆ. ಸುಮಾರು 20 ಲಕ್ಷ ಜನರು 2ನೇ ಡೋಸ್ ಲಸಿಕೆ ಪಡೆದಿಲ್ಲ. ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯಲು ಜನರು ಹಿಂದೇಟು ಹಾಕುತ್ತಿರುವುದರಿಂದ ಬಿಬಿಎಂಪಿ ಮನೆ ಮನೆಗೆ ತೆರಳಿ ಲಸಿಕೆ ನೀಡುತ್ತಿದೆ.