Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಿಎಸ್‌ವೈ, ಶೆಟ್ಟರ್ ಮನೆಗಳ ಮೇಲೆ ಯಾಕೆ ಐಟಿ ದಾಳಿಯಾಗುತ್ತಿಲ್ಲ: ಸಿಎಂ

ಬಿಎಸ್‌ವೈ, ಶೆಟ್ಟರ್ ಮನೆಗಳ ಮೇಲೆ ಯಾಕೆ ಐಟಿ ದಾಳಿಯಾಗುತ್ತಿಲ್ಲ: ಸಿಎಂ
ಹುಬ್ಬಳ್ಳಿ , ಮಂಗಳವಾರ, 24 ಏಪ್ರಿಲ್ 2018 (12:50 IST)
ಕೇಂದ್ರ ಸರ್ಕಾರ ಐಟಿ ಇಲಾಖೆಯನ್ನ ದುರುಪಯೋಗ ಮಾಡಿಕೊಳ್ಳುತ್ತಿದೆ. ಐಟಿ ದಾಳಿ ಮಾಡಿ ನಮ್ಮ ಪಕ್ಷದ ಮುಖಂಡರನ್ನ ಹೆದರಿಕೆ ಹಾಕಲು ಮುಂದಾಗುತ್ತಿದೆ.ಇದೊಂದು ರಾಜಕೀಯ ಹುನ್ನಾರ, ನಾನು ಇದನ್ನ ಖಂಡಿಸುತ್ತೆನೆ ಎಂದರು. ಬಿ.ಎಸ್. ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಮನೆ ಮೇಲೆ ಐಟಿ ದಾಳಿ ಏಕೆ ಆಗಿಲ್ಲ...? ಎಂದು ಹುಬ್ಬಳ್ಳಿಯಲ್ಲಿ ಸಿಎಮ್ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು.
ನಮ್ಮ ಕಾರ್ಯಕರ್ತರರು ನಮ್ಮ ಮುಖಂಡರು ಪ್ರಚಾರ ಮಾಡುತ್ತಾರೆ. ಕೇವಲ ನಾನು ಬಾದಾಮಿಯಲ್ಲಿ ಒಂದು ದಿನ ಪ್ರಚಾರ ಮಾಡುತ್ತೆನೆ. ನಾನು ಎರಡೂ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. 
 
ನಾನು ಯಾವ ಸರ್ವೆಯನ್ನ ನಂಬುವುದಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಮಹದೇವಪ್ಪನ ಮನೆ ಮೇಲೆ ಐಟಿ ದಾಳಿ ಮಾಡಿದ್ದು, ರಾಜಕೀಯ ಪ್ರೇರಿತವಾಗಿದೆ ಎಂದರು. 
 
ಬಾದಾಮಿಯಲ್ಲಿ ಬಿ.ಎಸ್.ಯಡಿಯೂರಪ್ಪ ನಿಂತುಕೊಳ್ಳಲಿ, ಶ್ರಿರಾಮುಲು ನಿಂತುಕೊಳ್ಳಲಿ ನಾನು ಬಹುಮತದಿಂದ ಗೆಲ್ಲುತ್ತೇನೆ. ಉತ್ತರ ಕರ್ನಾಟಕದ ಜನರ ಆಸೆಯಂತೆ ನಾನು ಸ್ಪರ್ಧೆ ಮಾಡುತ್ತಿದ್ದೇನೆ.ವರುಣಾ ಕ್ಷೇತ್ರದಲ್ಲಿ ಯಾರೇ ಸ್ಪರ್ಧೆ ಮಾಡಿದ್ರು 5೦ ಸಾವಿರ ಮತಗಳಿಂದ ಗೆಲ್ಲುತ್ತೇನೆ ಎಂದಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ವರುಣಾ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಣೆ