ಬಿ.ಎಸ್. ಯಡಿಯೂರಪ್ಪ ರ ಪುತ್ರ ವಿಜಯೇಂದ್ರನಿಗೆ ಟಿಕೆಟ್ ತಪ್ಪಿದ ಹಿನ್ನಲ್ಲೆಯಲ್ಲಿ ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸಿ ಹೋಟೆಲ್ ಮುಂದೆ ಪ್ರತಿಭಟನೆ ನಡೆಸುತ್ತದ್ದಾಗ ಪೊಲೀಸರು ಲಾಠಿ ಚಾರ್ಚ್ ನಡೆಸಿದ ಘಟನೆ ನಡೆದಿದೆ.
ವಿಶೇಷ ಕಾರಣಗಳಿಗಾಗಿ ಈ ಬಾರಿ ವಿಜಯೇಂದ್ರನಿಗೆ ಟಿಕೆಟ್ ನೀಡಲಾಗುತ್ತಿಲ್ಲ ಎಂದು ಬಿ.ಎಸ್. ಯಡಿಯೂರಪ್ಪ ಮಾಧ್ಯಮಗಳಿಗೆ ಹೇಳಿಕೆ ನೀಡಿ ರಾಜ್ಯ ಉಸ್ತುವಾರಿಗಳ ಜೊತೆ ಕಾರಿನಲ್ಲಿ ಹೊರಟು ಹೋದರು. ತಕ್ಷಣ ಅಲ್ಲೇ ಇದ್ದ ಬಿಜೆಪಿ ಕಾರ್ಯಕರ್ತರು ಕೇಂದ್ರ ನಾಯಕರ ವಿರುದ್ಧ ಘೋಷಣೆಗಳನ್ನ ಕೂಗಿ ಹೋಟೆಲ್ ಮುಂಭಾಗದಲ್ಲೇ ಕುಳಿತು ಪ್ರತಿಭಟನೆ ನಡೆಸುಲು ಪ್ರಯತ್ನಿಸಿದರು.
ತಕ್ಷಣ ಪರಿಸ್ಥಿತಿ ಅರಿತ ಪೊಲೀಸರು ಗುಂಪನ್ನ ಚದುರಿಸಲು ಲಘು ಲಾಠಿ ಚಾರ್ಚ್ ನಡೆಸಿ ಪರಿಸ್ಥಿತಿಯನ್ನ ಹತೋಟಿಗೆ ತಂದಿದ್ದು, ನಗರದ ಅಲ್ಲಲ್ಲಿ ಪ್ರತಿಭಟನೆಗಳು ಆರಂಭವಾಗಿದೆ.
ಈ ಮಧ್ಯ ವರುಣಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಈಗಾಗಲೇ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ತೋಟದಪ್ಪ ಬಸವರಾಜು ಎಂಬುವವರಿಗೆ ಬಿ ಫಾರಂ ವಿತರಿಸಲಾಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.