ನವದೆಹಲಿ: ಸುಳ್ಳು ಸುದ್ದಿ ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದ ಬೆನ್ನಲ್ಲೇ ವ್ಯಾಟ್ಸಪ್ ಸಂಸ್ಥೆ ತನ್ನ ಫಾರ್ವರ್ಡ್ ಸಂದೇಶಗಳ ಬಗ್ಗೆ ನಿಗಾವಹಿಸಲು ಹೊಸ ಫೀಚರ್ ಸೇರ್ಪಡೆಗೊಳಿಸಿದೆ.
ಇನ್ನು ಮುಂದೆ ವ್ಯಾಟ್ಸಪ್ ಗಳಲ್ಲಿ ಫಾರ್ವರ್ಡ್ ಮೆಸೇಜ್ ಯಾವುದು, ಅಥವಾ ನಿಮಗೆ ಕಳುಹಿಸಿದ ವ್ಯಕ್ತಿಯೇ ಆ ಸಂದೇಶ ನಿಜವಾಗಿಯೂ ಕಳುಹಿಸಿದ್ದಾರೆಯೇ ಎಂಬ ಸೂಚನೆ ಬರಲಿದೆ. ಇದರಿಂದ ಸುಳ್ಳು ಸುದ್ದಿ, ಪ್ರಚೋದನಕಾರಿ ಸಂದೇಶಗಳನ್ನು ಕಳುಹಿಸಿದ ನಿಜವಾದ ವ್ಯಕ್ತಿ ಯಾರು ಎಂಬುದು ಪತ್ತೆ ಹಚ್ಚಬಹುದಾಗಿದೆ.
ಸುಳ್ಳು ಮತ್ತು ಪ್ರಚೋದನಕಾರಿ ಸಂದೇಶಗಳಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂಬ ಕಾರಣಕ್ಕೆ ಅಂತಹ ಸುದ್ದಿಗಳಿಗೆ ಕಡಿವಾಣ ಹಾಕುವಂತೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಸೂಚನೆ ನೀಡಿತ್ತು. ಅದರಂತೆ ವ್ಯಾಟ್ಸಪ್ ಈ ಹೊಸ ಫೀಚರ್ ಸೇರಿಸಿಕೊಂಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.