ಬೆಂಗಳೂರು : ರೈತರ ಡಿಸೇಲ್ ಬಳಕೆಗೆ ಸಬ್ಸಿಡಿ ನೀಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.
ಸಿಎಂ ಬಸವರಾಜ ಬೊಮ್ಮಾಯಿ ಅವರು ಚೊಚ್ಚಲ ಬಜೆಟ್ ಮಂಡಿಸುತ್ತಿದ್ದಾರೆ. 2,65,720 ಕೋಟಿ ರೂ. ಗಾತ್ರದ ಬಜೆಟ್ನಲ್ಲಿ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ.
– ರೈತರಿಗೆ ಡಿಸೇಲ್ ಬಳಕೆಗೆ ಸಬ್ಸಿಡಿ.
– 7 ಹೊಸ ವಿವಿ ಘೋಷಣೆ. ಗೋವುಗಳ ದತ್ತು ಪಡೆಯಲು ಪುಣ್ಯ ಕೋಟಿ ಯೋಜನೆ
– ಅಕ್ರಮ ಸಕ್ರಮ ಯೋಜನೆ ಘೋಷಣೆ. ಬಿ ಖಾತೆಯಿಂದ ಎ ಖಾತೆ ವರ್ಗಾವಣೆಗೆ ಅವಕಾಶ
– ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ
– ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ 33,700 ಕೋಟಿ
– ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ವಿಸ್ತರಣೆ
– 200 ಕನ್ನಡ ಚಲನ ಚಿತ್ರಗಳಿಗೆ ಸಹಾಯಧನ ಘೋಷಣೆ
– ಧಾರ್ಮಿಕ ದತ್ತಿ ಇಲಾಖೆ ತಸ್ತೀಕ್ 60, ಸಾವಿರ ರೂ ಗಳಿಗೆ ಹೆಚ್ಚಳ. ಮುಜರಾಯಿ ದೇವಸ್ಥಾನ ಗಳಿಗೆ ಸ್ವಾಯತ್ತ ತೆ ನೀಡಲು ಕ್ರಮ
– ಕೆ ಎಸ್ ಆರ್ ಪಿ ಮಹಿಳಾ ಕಂಪನಿ ಆರಂಭ. ಕಾರಾಗೃಹದಲ್ಲಿ ಅತ್ಯಾಧುನಿಕ ಮಾದರಿಯ ಉಪಕರಣ ಅಳವಡಿಕೆ
– ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ನೆರವು