ಈ ವರ್ಷದಲ್ಲಿ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಇದೇ ತಿಂಗಳು ನವೆಂಬರ್ 19ರಂದು ಸಂಭವಿಸಲಿದೆ.ಇದು ಭಾಗಶಃ ಚಂದ್ರಗ್ರಹಣವಾಗಿದ್ದು ಸುಮಾರು ಮೂರು ಗಂಟೆಗಳ ಕಾಲ ಇರುತ್ತದೆ. ಇದು ಶತಮಾನದ ದೀರ್ಘವಾದ ಭಾಗಶಃ ಚಂದ್ರಗ್ರಹಣವಾಗಿದೆ. ಈಶಾನ್ಯ ಭಾರತದ ಕೆಲವು ಭಾಗಗಳಿಂದ ಗ್ರಹಣ ಗೋಚರಿಸಲಿದೆ. ಇದು ಪಶ್ಚಿಮ ಆಫ್ರಿಕಾ, ಪಶ್ಚಿಮ ಯುರೋಪ್, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಏಷ್ಯಾ, ಆಸ್ಟ್ರೇಲಿಯಾ, ಅಟ್ಲಾಂಟಿಕ್ ಸಾಗರ ಮತ್ತು ಫೆಸಿಫಿಕ್ ಮಹಾಸಾಗದಿಂದಲೂ ಗೋಚರಿಸುತ್ತದೆ.