ಈಶ್ವರಪ್ಪ ದಿಢೀರ್ ರಾಜಿನಾಮೆ ನೀಡಲು ಕಾರಣವೇನು?

Webdunia
ಶುಕ್ರವಾರ, 15 ಏಪ್ರಿಲ್ 2022 (10:12 IST)
ಬೆಂಗಳೂರು : ರಾಜೀನಾಮೆ ನೀಡಲ್ಲ ಎಂದು ಹಠಕ್ಕೆ ಬಿದ್ದಿದ್ದ ಈಶ್ವರಪ್ಪ ದಿಢೀರ್ ರಾಜೀನಾಮೆ ನೀಡಲು ಪ್ರಧಾನಿ ನರೇಂದ್ರ ಮೋದಿ ಕಾರಣ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
 
ಸರ್ಕಾರಕ್ಕೆ ಮುಜುಗರ ಆಗುತ್ತಿರುವ ಹಿನ್ನೆಲೆಯಲ್ಲಿ ನಿನ್ನೆಯೇ ಹೈಕಮಾಂಡ್ ಈಶ್ವರಪ್ಪಗೆ ರಾಜೀನಾಮೆ ನೀಡುವಂತೆ ಸೂಚಿಸಿತ್ತು. ಆದರೆ ಹೈಕಮಾಂಡ್ ನಾಯಕರೊಬ್ಬರು ಈಶ್ವರಪ್ಪ ರಾಜೀನಾಮೆಯನ್ನು ತಡೆದಿದ್ದರು.

ಹೈಕಮಾಂಡ್ ಸೂಚಿಸಿದ್ದರೂ ರಾಜೀನಾಮೆ ನೀಡದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸಿಟ್ಟಾಗಿದ್ದರು. ನಿಯಮ ಎಲ್ಲರಿಗೂ ಒಂದೇ ಎಂದು ಹೇಳಿ ಪ್ರಧಾನಿ ಗರಂ ಆಗಿದ್ದರು. ನಿನ್ನೆ ಈಶ್ವರಪ್ಪ ರಾಜೀನಾಮೆ ತಡೆದಿದ್ದ ಆ ಹೈಕಮಾಂಡ್ ನಾಯಕನಿಗೂ ಮೋದಿ ಕ್ಲಾಸ್ ಮಾಡಿದ್ದರು.

ಹೈಕಮಾಂಡ್ ನಾಯಕರಿಂದ ಒತ್ತಡ ಹೆಚ್ಚಾಗುತ್ತಿದ್ದಂತೆ ಸಿಎಂ ಸೂಚನೆ ಮೇರೆಗೆ ಈಶ್ವರಪ್ಪ ತನ್ನ ನಿರ್ಧಾರ ಬದಲಾಯಿಸಿ ಇಂದು ಸಂಜೆ ಶಿವಮೊಗ್ಗದ್ದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

50 ಕುಟುಂಬಗಳು ವಾಸವಿದ್ದ ಅಪಾರ್ಟ್‌ಮೆಂಟ್‌ಗೆ ತಗುಲಿದ ಬೆಂಕಿ, ಇಬ್ಬರು ಸಾವು, ರಕ್ಷಣಾ ಕಾರ್ಯಚರಣೆಯ ವಿಡಿಯೋ

ದೇಶದ ಈ ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಕೆಲ ದಿನಗಳವರೆಗೆ ವಿಸ್ತರಣೆ, ಕರ್ನಾಟಕವೂ ಸೇರಿದೆಯಾ ಇಲ್ಲಿದೆ ಮಾಹಿತಿ

ಅಯೋದ್ಯೆ ರಾಮಮಂದಿರ ದೇಣಿಗೆ ವಿವಾದ: ಮುಂದಿನ 48ಗಂಟೆಗಳಲ್ಲಿ ಅಂತಿಮ ವರದಿ

ಮಾನ್ಸೂನ್‌ ವೈಪರೀತ್ಯ: 112 ವರ್ಷಗಳಲ್ಲಿ ಬೆಂಗಳೂರಿನಲ್ಲಿ ಇತಿಹಾಸ ಬರೆದ ಹವಾಮಾನ

ಸಚಿವ ಸಂಪುಟ ವಿಸ್ತರಣೆ ನಡುವೆ ಸಿದ್ದರಾಮಯ್ಯ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್, ಭಾರೀ ಕುತೂಹಲ

ಮುಂದಿನ ಸುದ್ದಿ
Show comments