Select Your Language

Notifications

webdunia
webdunia
webdunia
webdunia

ಹಾಸ್ಟೆಲ್ಗಳಿಗೆ ಏನೆಲ್ಲ ಮಾರ್ಗಸೂಚಿ ಜಾರಿ?

ಹಾಸ್ಟೆಲ್ಗಳಿಗೆ ಏನೆಲ್ಲ ಮಾರ್ಗಸೂಚಿ ಜಾರಿ?
ಬೆಂಗಳೂರು , ಗುರುವಾರ, 9 ಡಿಸೆಂಬರ್ 2021 (14:19 IST)
ಬೆಂಗಳೂರು : ಮಹಾಮಾರಿ ಕೊರೊನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಅದರಲ್ಲೂ ಈ ಬಾರಿ ಮಹಾಮಾರಿ ಹೆಚ್ಚಾಗಿ ಮಕ್ಕಳ ಮೇಲೆ, ವಿದ್ಯಾರ್ಥಿಗಳ ಮೇಲೆ ಕಣ್ಣಿಟ್ಟಿದೆ. ಶಾಲಾ-ಕಾಲೇಜುಗಳಲ್ಲಿ ಹೆಚ್ಚಾಗಿ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಸದ್ಯ ರಾಜ್ಯದ ಹಾಸ್ಟೆಲ್‌ಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಹೊಸ ಮಾರ್ಗಸೂಚಿ ಜಾರಿ ಮಾಡಿದ್ದಾರೆ.
ರಾಜ್ಯದ ಹಾಸ್ಟೆಲ್ಗಳಿಗೆ ಹೊಸ ಮಾರ್ಗಸೂಚಿ
-ಹಾಸ್ಟೆಲ್‌ನಲ್ಲಿ ಮಕ್ಕಳು ಒಟ್ಟಿಗೆ ಊಟಕ್ಕೆ ಹೋಗುವಂತಿಲ್ಲ
-ಅಂತರ ಪಾಲಿಸಿಕೊಂಡು ಊಟ ಮಾಡುವುದಕ್ಕೆ ಹಾಸ್ಟೆಲ್‌ಗಳಲ್ಲಿ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ
-ಹಾಸ್ಟೆಲ್ ಸಿಬ್ಬಂದಿಗೆ 2 ಡೋಸ್ ಕೊವಿಡ್ ಲಸಿಕೆ ಕಡ್ಡಾಯ
-ಹಾಸ್ಟೆಲ್‌ಗಳಿಗೆ ಹೊಸಬರಿಗೆ ಕಡ್ಡಾಯವಾಗಿ ಪ್ರವೇಶ ಇಲ್ಲ.
ಸದ್ಯ ಕೊರೊನಾ ವಿಚಾರದಲ್ಲಿ, ಒಮಿಕ್ರಾನ್ ವಿಚಾರದಲ್ಲಿ ಗಾಬರಿ, ಆತಂಕ ಅಗತ್ಯ ಇಲ್ಲ. ಈಗ ಸಭೆಯಲ್ಲಿ ಕ್ಲಸ್ಟರ್ ಮತ್ತು ಹಾಸ್ಟೆಲ್ಗಳಲ್ಲಿ ಹೊಸ ಕೋವಿಡ್ ನಿಯಮಗಳ ಜಾರಿಗೆ ನಿರ್ಧರಿಸಲಾಯಿತು. ಹಾಸ್ಟೆಲ್ಗಳಲ್ಲಿ ವಿಭಾಗಿಸಿ ಉಪಹಾರ, ಊಟದ ವ್ಯವಸ್ಥೆ ಮಾಡಬೇಕು. ಹಾಸ್ಟೆಲ್, ಕ್ಲಸ್ಟರ್ ಗಳಿಗೆ ಪ್ರತ್ಯೇಕ ನಿಯಮ ತರಲಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯ ಬಳಿಕ ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಕೊರೊನಾ ಭೀತಿ