Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನವದೆಹಲಿ : ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಮಧ್ಯೆ,
ದೆಹಲಿಯ ವಿಪತ್ತು ನಿರ್ವಾಹಣಾ ಪ್ರಾಧಿಕಾರ ಸೂಚಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ದೆಹಲಿಯ ಮೆಹ್ರೌಲಿಯ ರೆಸ್ಟೋರೆಂಟ್ಗೆ ಬೀಗ ಜಡಿದಿದ್ದಾರೆ.
ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘಿಸಿ ಗುರುವಾರ ರಾತ್ರಿ ಸುಮಾರು 10.45 ಗಂಟೆಗೆ ರೆಸ್ಟೋರೆಂಟ್ನಲ್ಲಿ ಸುಮಾರು 600 ಜನ ಸೇರಿ ಪಾರ್ಟಿ ನಡೆಸುತ್ತಿದ್ದು, ಈ ವಿಷಯ ತಿಳಿದ ಮೆಹ್ರೌಲಿಯ ತಹಶೀಲ್ದಾರ ಎಸ್ಹೆಚ್ ಸುನೀಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ರೆಸ್ಟೋರೆಂಟ್ಗೆ ಮೊಹರು ಹಾಕಿದ್ದಾರೆ.