ನವದೆಹಲಿ : ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ(ಎನ್ಪಿಸಿಐ) ವಾಟ್ಸಪ್ಗೆ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್(ಯುಪಿಐ) ಮೂಲಕ ಡಿಜಿಟಲ್ ಪಾವತಿಯ ಸೇವೆಗಳನ್ನು 10 ಕೋಟಿ ಬಳಕೆದಾರರಿಗೆ ಒದಗಿಸಲು ಅನುಮತಿ ನೀಡಿದೆ.
ಎನ್ಸಿಪಿಐ ಕಳೆದ ವರ್ಷ ನವೆಂಬರ್ನಲ್ಲಿ ವಾಟ್ಸಪ್ಗೆ 2 ಕೋಟಿ ಬಳಕೆದಾರರಿಗೆ ನೀಡಿದ್ದ ಸೇವೆಯ ಅನುಮತಿಯನ್ನು ದ್ವಿಗುಣಗೊಳಿಸಿತ್ತು. ಇದೀಗ 10 ಕೋಟಿ ಬಳಕೆದಾರರಿಗೆ ಯುಪಿಐ ಸೇವೆ ನೀಡಲು ಅನುಮತಿ ನೀಡಿದೆ.
ವಾಟ್ಸಪ್ ಭಾರತದಲ್ಲಿ ತನ್ನ ಎಲ್ಲಾ ಬಳಕೆದಾರರಿಗೂ ಯಾವುದೇ ಮಿತಿಯಿಲ್ಲದೇ ತನ್ನ ಯುಪಿಐ ಸೇವೆಯನ್ನು ಒದಗಿಸಲು ಅನುಮತಿ ಕೋರಿತ್ತು.
ಆದರೆ ಎನ್ಸಿಪಿಐ ಒಂದೇ ಬಾರಿಗೆ ಈ ಸೇವೆಯನ್ನು ಬಳಕೆದಾರರಿಗೆ ನೀಡಲು ಅನುಮತಿ ಕೊಡದೇ ಹಂತ ಹಂತವಾಗಿ ಅವಕಾಶ ನೀಡುತ್ತಿದೆ. ಪ್ರಸ್ತುತ ಭಾರತದಲ್ಲಿ 48 ಕೋಟಿ ಜನ ವಾಟ್ಸಪ್ ಬಳಕೆ ಮಾಡುತ್ತಿದ್ದಾರೆ.