ಲಕ್ನೋ : 2017ರ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಉತ್ತರ ಪ್ರದೇಶದ ಸಚಿವ ಮಾಯಂಕೇಶ್ವರ್ ಶರಣ್ ಸಿಂಗ್ ಅವರು ಶನಿವಾರ ಸುಲ್ತಾನ್ಪುರದ ನ್ಯಾಯಾಲಯಕ್ಕೆ ಹಾಜರಾಗಿ 500 ರೂ. ದಂಡವನ್ನು ನೀಡಿದ್ದಾರೆ.
ಬಳಿಕ ಹೈಕೋರ್ಟ್ ಅವರ ವಿರುದ್ಧದ ವಿಚಾರಣೆಯನ್ನು ಕೊನೆಗೊಳಿಸಿದೆ. ತಿಲೋಯ್ ವಿಧಾನಸಭಾ ಕ್ಷೇತ್ರದಿಂದ 5 ಬಾರಿ ಶಾಸಕರಾಗಿರುವ ಆರೋಗ್ಯ ಖಾತೆಯ ರಾಜ್ಯ ಸಚಿವ ಶರಣ್ ಸಿಂಗ್ ಅವರು,
ಹೈಕೋರ್ಟ್ನ ನಿರ್ದೇಶನದ ಮೇರೆಗೆ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (3) ಸೈಮಾ ಸಿದ್ದಿಕಿ ಜರಾರ್ ಆಲಂ ಅವರ ನ್ಯಾಯಾಲಯಕ್ಕೆ ಹಾಜರಾದರು.
ಶರಣ್ ಸಿಂಗ್ ಅವರು ದಂಡದ ಮೊತ್ತವನ್ನು ಠೇವಣಿ ಮಾಡಿ, ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಅರ್ಜಿ ಸಲ್ಲಿಸಿದರು. ಈ ಅರ್ಜಿಯನ್ನು ಸ್ಥಳೀಯ ನ್ಯಾಯಾಲಯ ಸ್ವೀಕರಿಸಿದ್ದು, ಅವರ ಪ್ರಕರಣದ ವಿಚಾರಣೆಯನ್ನು ಕೊನೆಗೊಳಿಸುವಂತೆ ಆದೇಶ ನೀಡಿದೆ.