ನವದೆಹಲಿ: ಶಾಲೆಗಳಲ್ಲಿ ವಿದ್ಯಾರ್ಥಿಗಳ ಯೂನಿಫಾರ್ಮ್ ಬಗ್ಗೆ ಶಾಲಾ ಆಡಳಿತ ಮಂಡಳಿ ನಿರ್ಧಾರ ಕೈಗೊಳ್ಳುವುದು ಹೊಸತೇನಲ್ಲ. ಆದರೆ ಪುಣೆಯ ಪ್ರತಿಷ್ಠಿತ ಶಾಲೆಯೊಂದು ವಿದ್ಯಾರ್ಥಿನಿಯರ ಒಳ ಉಡುಪಿನ ಬಣ್ಣದ ಬಗ್ಗೆ ಆದೇಶ ನೀಡಿ ವಿವಾದಕ್ಕೆ ಕಾರಣವಾಗಿದೆ.
ವಿಶ್ವಶಾಂತಿ ಗುರುಕುಲ ಎಂಬ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ತನ್ನ ಶಾಲೆಯಲ್ಲಿ ಓದುವ ಬಾಲಕಿಯರ ಒಳ ಉಡುಪಿನ ಬಣ್ಣ ಬಿಳಿ ಅಥವಾ ಚರ್ಮದ ಬಣ್ಣದ್ದಾಗಿರಬೇಕು ಎಂದು ಆದೇಶ ನೀಡಿ ವಿವಾದಕ್ಕೆ ಕಾರಣವಾಗಿದೆ.
ಅಷ್ಟೇ ಅಲ್ಲ, ಪೋಷಕರಿಗೆ ಈ ಆದೇಶದ ಪ್ರತಿಗೆ ಸಹಿ ಹಾಕುವಂತೆ ಶಾಲಾ ಆಡಳಿತ ಮಂಡಳಿ ಬಲವಂತ ಮಾಡಿದೆ. ತಪ್ಪಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆದರಿಕೆ ಹಾಕಿದೆ ಎಂದು ಪೋಷಕರು ದೂರಿದ್ದಾರೆ.
ಅಷ್ಟೇ ಅಲ್ಲ, ಒಂದು ಬಾರಿಗೆ ವಾಶ್ ರೂಂಗೆ ಇಷ್ಟೇ ವಿದ್ಯಾರ್ಥಿನಿಯರು ಹೋಗಬಹುದೆಂಬ ವಿಚಿತ್ರ ನಿಯಮವನ್ನೂ ಆಡಳಿತ ಮಂಡಳಿ ಹೊರಡಿಸಿದೆ ಎಂದು ಪೋಷಕರು ದೂರಿದ್ದಾರೆ. ಈ ಹಿನ್ನಲೆಯಲ್ಲಿ ಪೋಷಕರು ಶಾಲೆಯ ಆಡಳಿತ ಮಂಡಳಿ ವಿರುದ್ಧ ಇದೀಗ ಪ್ರತಿಭಟನೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.