ಕೊಯಮತ್ತೂರು : ವಿಪತ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಜಾಗೃತಿ ಕ್ರಮಗಳನ್ನು ತಿಳಿಸಲು ಹೋಗಿ ತರಬೇತುದಾರ ವಿದ್ಯಾರ್ಥಿಯೊಬ್ಬಳನ್ನು ಕಟ್ಟಡದ ಎರಡನೇ ಮಹಡಿಯಿಂದ ಬಲವಂತವಾಗಿ ತಳ್ಳಿದ ಕಾರಣ ಆಕೆ ಸಾವಿಗೀಡಾದ ಘಟನೆ ತಮಿಳುನಾಡಿದ ಕೊಯಮತ್ತೂರಿನಲ್ಲಿ ಸಂಭವಿಸಿದೆ.
ಲೋಕೇಶ್ವರಿ ದಾರಣವಾಗಿ ಸಾವನ್ನಪ್ಪಿದ ವಿದ್ಯಾರ್ಥಿನಿ. ಕೊವಯ್ ಕಲೈಮಗಳ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ವಿಪತ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಜಾಗೃತಿ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಇತ್ತು. ಈ ವೇಳೆ ಲೋಕೇಶ್ವರಿ ಮತ್ತು ತರಬೇತುದಾರ ಎರಡನೇ ಮಹಡಿಯಲ್ಲಿ ಡೆಮೊಗಾಗಿ ನಿಂತಿದ್ದರು. ಸುರಕ್ಷತೆಗಾಗಿ ಒಂದು ಹಗ್ಗ ಕಟ್ಟಲಾಗಿತ್ತು. ಕೆಳಗೆ ವಿದ್ಯಾರ್ಥಿಗಳು ಬಲೆಯನ್ನು ಹಿಡಿದುಕೊಂಡಿದ್ದು, ಆಕೆ ಕೆಳಗೆ ಬೀಳುವಾಗ ಆಕೆಯನ್ನು ಬಲೆಯಲ್ಲಿ ರಕ್ಷಿಸುವುದು ಇದರ ಉದ್ದೇಶವಾಗಿತ್ತು.
ಆದರೆ ನಡೆದಿದ್ದೇ ಬೇರೆ. ಆಕೆಯನ್ನು ತರಬೇತುದಾರ ಕೆಳಕ್ಕೆ ತಳ್ಳಿದಾಗ ಆಕೆ ಬೀಳುವ ರಭಸಕ್ಕೆ ಮೊದಲ ಮಹಡಿಯಲ್ಲಿದ್ದ ಸಜ್ಞಾಗೆ ಆಕೆಯ ತಲೆ ಬಡಿದು ದುರಂತ ಸಾವಿಗೀಡಾಗಿದ್ದಾಳೆ. ಇದನ್ನುವಿದ್ಯಾರ್ಥಿಗಳು ವಿಡಿಯೋ ಮಾಡಿದ್ದು, ಇಡೀ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ