Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಣ ಬಿಸಿಲಿಗೆ ತತ್ತರಿಸಿದ ಕೊಡಗಿನ ಜನತೆ

ರಣ ಬಿಸಿಲಿಗೆ ತತ್ತರಿಸಿದ ಕೊಡಗಿನ ಜನತೆ
ಮಡಿಕೇರಿ , ಶುಕ್ರವಾರ, 21 ಏಪ್ರಿಲ್ 2023 (07:54 IST)
ಮಡಿಕೇರಿ : ರಾಜ್ಯದೆಲ್ಲೆಡೆ ವಿಧಾನಸಭಾ ಚುನಾವಣೆಯ ಕಾವು ರಂಗೇರಿದ್ದರೆ, ಪ್ರಕೃತಿ ತವರು ಕೊಡಗು ಜಿಲ್ಲೆಯಲ್ಲಿ ಮಾತ್ರ ಚುನಾವಣಾ ಕಣ ಮಂಕಾಗಿದ್ದು, ರಣಬಿಸಿಲು ಜಿಲ್ಲೆಯ ಜನರನ್ನು ತತ್ತರಿಸುವಂತೆ ಮಾಡಿದೆ.

ಜಿಲ್ಲೆಯಲ್ಲಿ ಹಿಂದೆಂದೂ ಕಾಣದ ಬಿಸಿಲು ಹೆಚ್ಚಾಗುತ್ತಿದೆ. ತಂಪಾದ ಗಾಳಿ ಬೇಕು ಎಂದು ಬಯಸಿರುವ ಜನ, ಫ್ಯಾನ್ ಹಾಗೂ ಎಸಿ ಮೊರೆ ಹೋಗಿದ್ದಾರೆ. ಛತ್ರಿ ಇಲ್ಲದೇ ಮನೆಯಿಂದ ಹೊರಗೆ ಹೋಗಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. 

ಪಶ್ಚಿಮಘಟ್ಟ ಮತ್ತು ನಿತ್ಯಹರಿದ್ವರ್ಣ ಕಾಡುಗಳಿಂದ ಕೂಡಿರುವ ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತಲೂ ಅತೀ ಹೆಚ್ಚು ಬಿಸಿಲು ಕಂಡುಬರುತ್ತಿದೆ. ಈವರೆಗೂ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಸರಿಯಾಗಿ ಆಗದಿರುವುದರಿಂದ ತಾಪಮಾನ ಹೆಚ್ಚುತ್ತಲೇ ಇದೆ.

ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರದ ಅಂಕಿ ಅಂಶಗಳ ಪ್ರಕಾರ ಗರಿಷ್ಠ ತಾಪಮಾನ 36 ರಿಂದ 40 ಡಿಗ್ರಿಯ ನಡುವೆ ಇದೆ. ಅಂದರೆ ಪ್ರತಿದಿನ 36 ಡಿಗ್ರಿಗೂ ಹೆಚ್ಚಿನ ತಾಪಮಾನ ದಾಖಲಾಗುತ್ತಿದೆ. ಹೀಗಾಗಿ ಸದಾ ತಂಪಾಗಿರುತ್ತಿದ್ದ ಕೊಡಗು ಕಾದ ಕಬ್ಬಿಣದಂತಾಗಿದೆ.

ಈ ಬಾರಿ ಜನವರಿಯಿಂದ ಇಲ್ಲಿವರೆಗೆ ಕೆಲವು ಭಾಗಗಳಲ್ಲಿ ಬಿಟ್ಟರೆ ಬಹುತೇಕ ಕಡೆ ಒಂದು ಮಳೆಯೂ ಆಗಿಲ್ಲ. ಇದರಿಂದಾಗಿ ತಾಪಮಾನದಲ್ಲಿ ಏರಿಕೆಯಾಗಿದ್ದು ಜನ ಕಂಗಾಲಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ಗೆ ಹಿನ್ನಡೆ : ಜೈಲು ಶಿಕ್ಷೆಗೆ ತಡೆ ಕೋರಿದ ಅರ್ಜಿ ವಜಾ