Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬ್ರಿಟಿಷರ ನಂತರ ನ್ಯಾಯಾಂಗಕ್ಕೆ ಉತ್ತಮ ಮೂಲಸೌಕರ್ಯ ಕಡೆಗಣಿಸಲಾಗಿದೆ: ಸಿಜೆಐ ರಮಣ

ಬ್ರಿಟಿಷರ ನಂತರ ನ್ಯಾಯಾಂಗಕ್ಕೆ ಉತ್ತಮ ಮೂಲಸೌಕರ್ಯ ಕಡೆಗಣಿಸಲಾಗಿದೆ: ಸಿಜೆಐ ರಮಣ
ನವದೆಹಲಿ , ಭಾನುವಾರ, 12 ಸೆಪ್ಟಂಬರ್ 2021 (10:52 IST)
ನವದೆಹಲಿ : ಭಾರತದ ನ್ಯಾಯಾಂಗ ವ್ಯವಸ್ಥೆ ಇಂದಿಗೂ ಯಾವುದೇ ಯೋಗ್ಯ ಅನುಕೂಲವಿಲ್ಲದೆ 'ಶಿಥಿಲಾವಸ್ಥೆ'ಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಬ್ರಿಟಿಷರು ಹೋದ ನಂತರ ನ್ಯಾಯಾಂಗ ವ್ಯವಸ್ಥೆಯನ್ನು ಉತ್ತಮ ಮೂಲಸೌಕರ್ಯಗಳಿಂದ ಕಡೆಗಣಿಸಲಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಎನ್.ವಿ.ರಮಣ ವಿಷಾದ ವ್ಯಕ್ತಪಡಿಸಿದ್ದಾರೆ.

ಪ್ರಯಾಗರಾಜ್ನಲ್ಲಿ ಶನಿವಾರ ಅಲಹಾಬಾದ್ ಹೈಕೋರ್ಟ್ನ ಹೊಸ ಸಂಕೀರ್ಣ ಶಂಕುಸ್ಥಾಪನೆ ಮಾಡಿದ ಸಂದರ್ಭದಲ್ಲಿ ಮಾತನಾಡಿದ ನ್ಯಾಯಮೂರ್ತಿಗಳು, 'ಭಾರತದಲ್ಲಿ ಕೋರ್ಟ್ಗಳು ಮೂಲಭೂತ ವ್ಯವಸ್ಥೆಗಳಿಲ್ಲದೆ ಇಂದಿಗೂ ಶಿಥಿಲಾವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಂತಹ ಪರಿಸ್ಥಿತಿ ಕೋರ್ಟ್ಗೆ ಆಗಮಿಸುವ ಕಕ್ಷಿಗಾರರು ಮತ್ತು ವಕೀಲರಿಗೆ ಅಹಿತಕರವಾಗಿದೆ. ನ್ಯಾಯಮೂರ್ತಿಗಳಿಗೆ, ಕೋರ್ಟ್ ಸಿಬ್ಬಂದಿಗೆ ಒಗ್ಗದ ವಾತಾವರಣವಿದೆ. ಇದರಿಂದ ಕೋರ್ಟ್ನ ಕೆಲಸಗಳು ಸಮರ್ಪಕವಾಗಿ ನಡೆಸಲು ಕಷ್ಟವಾಗುತ್ತಿದೆ. ಬ್ರಿಟಿಷರು ಭಾರತವನ್ನು ಬಿಟ್ಟು ಹೋದ ಬಳಿಕ ಕೋರ್ಟ್ಗೆ ಒದಗಿಸಬೇಕಿದ್ದ ಉತ್ತಮ ಮೂಲಭೂತ ವ್ಯವಸ್ಥೆಗಳನ್ನು ಕಡೆಗಣಿಸಲಾಗಿದೆ ಎಂದರು.
ರಾಷ್ಟ್ರೀಯ ನ್ಯಾಯಾಂಗ ಪೂರ್ವರಚನೆ ನಿಗಮ(ಎನ್ಜೆಐಸಿ)ಕ್ಕೆ ಒತ್ತು ನೀಡಲು ಇದೇ ಕಾರಣವಾಗಿದೆ. ರಾಷ್ಟ್ರೀಯ ನ್ಯಾಯಾಲಯ ಅಭಿವೃದ್ಧಿ ಯೋಜನೆಯ ಪರಿಕಲ್ಪನೆಗಳ ಅಭಿವೃದ್ಧಿ ಮತ್ತು ಅನುಷ್ಠಾನಕ್ಕೆ ತರುವ ಕೆಲಸವನ್ನು ಎನ್ಜೆಐಸಿ ನಿರ್ವಹಿಸಲಿದೆ ಎಂದು ಸಿಜೆಐ ರಮಣ ತಿಳಿಸಿದರು.
ಇದೇ ವೇಳೆ, ಪ್ರಧಾನಿ ಇಂದಿರಾ ಗಾಂಧಿಯವರನ್ನು ಅನರ್ಹಗೊಳಿಸಿದ ಅಲಹಾಬಾದ್ ಹೈಕೋರ್ಟ್ನ 1975ರ ತೀರ್ಪು ನ್ಯಾಯಾಂಗ ಇತಿಹಾಸದಲ್ಲೇ 'ಮಹಾ ಧೈರ್ಯದ ತೀರ್ಪು' ಎಂದು ರಮಣ ವ್ಯಾಖ್ಯಾನಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಲಬುರಗಿ ಮಹಾನಗರ ಪಾಲಿಕೆ ಮೈತ್ರಿ ವಿಚಾರ : ನಾಳೆ ಅಂತಿಮ ನಿರ್ಧಾರ ಪ್ರಕಟ