ಚುನಾವಣೆ ಪ್ರಚಾರದ ವೇಳೆಯಲ್ಲಿ ಸಿಎಂ ಆಗಿ ನಮ್ಮೂರಿಗೆ ಏನ್ ಮಾಡಿದ್ದೀರಿ ಎಂದು ಜನ ಪ್ರಶ್ನಿಸುತ್ತಿರುವ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಸಿಎಂ ಹಿಂದೇಟು ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಶಾಸಕ ಸತ್ಯನಾರಾಯಣರ ಸ್ವಗ್ರಾಮದಲ್ಲಿ ಅಭಿವೃದ್ಧಿಗೆ ಹಣ ಏಕೆ ಕೊಡಲಿಲ್ಲ ಎಂದು ಸಿಎಂಗೆ ಪ್ರಶ್ನಿಸಿದ ಗ್ರಾಮಸ್ಥರು, ಸಿಎಂ ಪ್ರಚಾರಕ್ಕೆ ಬಂದಾಗ ಯಲಚಹಳ್ಳಿಯಲ್ಲಿ ಗ್ರಾಮದ ಜನತೆ ಜಿಟಿ ದೇವೇಗೌಡ, ಕುಮಾರಸ್ವಾಮಿ ಪರ ಘೋಷಣೆ ಕೂಗಿದ್ದರಿಂದ ಸಿಎಂ ಸಿದ್ದರಾಮಯ್ಯ ಮುಜುಗರಕ್ಕೆ ಒಳಗಾದಂತೆ ಕಂಡು ಬಂದಿದೆ ಎನ್ನಲಾಗುತ್ತಿದೆ.
ಜೆಡಿಎಸ್ ಪರ ಘೋಷಣೆ ಕೇಳುತ್ತಿದ್ದಂತೆ ಕಾರಿನಿಂದ ಕೆಳಗಿಳಿಯದೆ ತೆರಳಿದ ಸಿಎಂ, ಜೆಡಿಎಸ್ ಮುಖಂಡರನ್ನು ಸೆಳೆಯುವ ಪ್ರಯತ್ನಗಳು ಮೇಲಿಂದ ಮೇಲೆ ವಿಫಲವಾಗಿದ್ದಾರೆ. ಬೆಳವಾಡಿ ಶಿವಮೂರ್ತಿ, ಮಾವನಹಳ್ಳಿ ಸಿದ್ದೇಗೌಡಗೆ ಗಾಳ ಹಾಕಿ ಕೂಡಾ ವಿಫಲವಾಗಿದ್ದಾರೆ ಎನ್ನಲಾಗುತ್ತಿದೆ.
ಇಂದು ಕ್ಷೇತ್ರದಲ್ಲಿ ನಾಲ್ಕನೇ ದಿನದ ಪ್ರವಾಸ ಹಮ್ಮಿಕೊಂಡಿರುವ ಸಿಎಂ ಸಿದ್ದರಾಮಯ್ಯ, ನಾಯಕರು ಹಾಗೂ ಲಿಂಗಾಯತ ಸಮುದಾಯಗಳ ಗ್ರಾಮಗಳಿಗೆ ಭೇಟಿ ನೀಡಿ ಜಯಪುರ ಹೋಬಳಿಯಲ್ಲೂ ಸಿಎಂ ಸಿದ್ದರಾಮಯ್ಯ ಪ್ರಚಾರ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.