Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮೈಸೂರು: ಮುಂಬರುವ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. ಬಿಜೆಪಿಯ ಚುನಾವಣಾ ಚಾಣಕ್ಯರೆಂದೇ ಖ್ಯಾತರಾದ ಮೋದಿ-ಶಾ ಜೋಡಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.
‘ಮೋದಿ, ಶಾ ಬಂದು ಇಲ್ಲೇನು ಮಾಟ ಮಂತ್ರ ಮಾಡಕ್ಕಾಗಲ್ಲ. ಯಾರು ಬಂದರೂ, ಹೋದರೂ ಜನ ವೋಟು ಹಾಕೋರಿಗೇ ಹಾಕೋದು. ಅಮಿತ್ ಶಾ ಮೈಸೂರಿಗೆ ಬಂದಿದ್ದರಿಂದ ಏನಾಯ್ತು? ಬಿಜೆಪಿಯವರು ಬಿಜೆಪಿ ಪರ ಪ್ರಚಾರ ಮಾಡ್ತಾರೆ. ಜೆಡಿಎಸ್ ನವರು ಜೆಡಿಎಸ್ ಪರ ಪ್ರಚಾರ ಮಾಡ್ತಾರೆ. ಇದೆಲ್ಲಾ ಚುನಾವಣಾ ರಣತಂತ್ರ ಅಷ್ಟೇ. ಇದರಿಂದ ಯಾವುದೂ ಏನೂ ಆಗಲ್ಲ’ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದೇ ವೇಳೆ ನಾಳೆಯಿಂದ ದಾವಣಗೆರೆಯಲ್ಲಿ ಪ್ರಚಾರ ಕಾರ್ಯ ಮಾಡುವುದಾಗಿ ಸಿಎಂ ಘೋಷಿಸಿದ್ದಾರೆ. ಚುನಾವಣೆ ಆದ್ದರಿಂದ ಎಲ್ಲಾ ಕಡೆ ಪ್ರಚಾರ ಮಾಡುವುದಾಗಿ ಅವರು ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ