ಪ್ರಮಾಣ ವಚನ ಸಮಾರಂಭದ ವಿಶೇಷತೆಗಳೇನು?

Webdunia
ಬುಧವಾರ, 23 ಮೇ 2018 (09:45 IST)
ಬೆಂಗಳೂರು: ಇಂದು ಸಂಜೆ 4.30 ಕ್ಕೆ ವಿಧಾನಸೌಧದ ಮುಂಭಾಗ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಎಚ್ ಡಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಈ ಸಮಾರಂಭಕ್ಕೆ ವಿಧಾನಸೌಧದ ಮುಂಭಾಗ ಸಂಪೂರ್ಣ ಸಜ್ಜಾಗಿದೆ. ರಾಜ್ಯ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ನೇತೃತ್ವದಲ್ಲಿ ಅಧಿಕಾರಿಗಳು ಸಮಾರಂಭಕ್ಕೆ ಸಕಲ ರೀತಿಯ ತಯಾರಿ ನಡೆಸಿದ್ದಾರೆ.

ವಿಧಾನಸೌಧದ ಮುಂಭಾಗದಲ್ಲಿ ಭವ್ಯ ವೇದಿಕೆ ನಿರ್ಮಿಸಲಾಗಿದೆ. ವೇದಿಕೆ ಪಕ್ಕ ಸುಮಾರು 3000 ಆಸನಗಳನ್ನು ಗಣ್ಯರಿಗೆಂದೇ ಮೀಸಲಿಡಲಾಗಿದೆ. ಕಾರ್ಯಕ್ರಮಕ್ಕೆ ಲಕ್ಷ ಜನ ಸೇರುವ ನಿರೀಕ್ಷೆಯಿದ್ದು, ಇದಕ್ಕಾಗಿ ಇಂದು ವಿಧಾನಸೌಧದ ಮುಂಭಾಗದ ರಸ್ತೆಯಲ್ಲಿ ಸಂಚಾರ ನಿಷೇಧಿಸಲಾಗಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ಅಲ್ಲಲ್ಲಿ ಎಲ್ ಸಿಡಿ ಪರದೆಗಳನ್ನೂ ಹಾಕಲಾಗಿದೆ. ವಾಹನ ನಿಲುಗಡೆಗೆ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್, ಯುಬಿ ಸಿಟಿ, ಕಂಠೀರವ ಮೈದಾನ, ಸರ್ಕಾರಿ ಕಲಾ ಕಾಲೇಜಿ ಆವರಣ, ಸೆಂಟ್ರಲ್ ಕಾಲೇಜ್ ಆವರಣ ಮುಂತಾದೆಡೆ ಸಾರ್ವಜನಿಕರು ವಾಹನ ನಿಲುಗಡೆ ಮಾಡಬಹುದಾಗಿದೆ. ಗಣ್ಯರು, ಶಾಸಕರ ವಾಹನಗಳನ್ನು ವಿಕಾಸ ಸೌಧದ ವಾಹನ ನಿಲುಗಡೆ ಮಾಡಬಹುದಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೈಕ್ ನಲ್ಲಿ ಹೋಗುತ್ತಿದ್ದಾಗ ಚಿರತೆ ಅಟ್ಯಾಕ್: ಯುವಕ ಮಾಡಿದ ಕೆಲಸಕ್ಕೆ ಚಿರತೆಗೆ ಫುಲ್ ನಡುಕ video

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮಗು ಕಿಡ್ನ್ಯಾಪ್ ಮಾಡಲು ಬಂದವರಿಗೆ ಏನು ಮಾಡ್ತು ನೋಡಿ ಈ ದನ: ಕೊನೆಯವರೆಗೂ ನೋಡಿ Video

ಕೆಸ್ಆರ್ ಟಿಸಿ ಬಸ್ ಕೇರಳಂನಲ್ಲಿ ಫ್ರೀ, ಕರ್ನಾಟಕದಲ್ಲಿ ಫ್ರೀ: ಆದ್ರೆ ಗಡಿನಾಡ ಮಹಿಳೆಯರಿಗೆ ನೋ ಯೂಸ್

ಕಾಕ್ರೋಚ್ ಜನತಾ ಪಾರ್ಟಿಗೆ ಎಎಪಿ ಲಿಂಕ್ ಇದೆಯೇ, ಬಾಂಗ್ಲಾ, ನೇಪಾಳ ರೀತಿ ಜೆನ್ ಜಿ ಕ್ರಾಂತಿಗೆ ಹುನ್ನಾರವೇ

ಮುಂದಿನ ಸುದ್ದಿ
Show comments