ಬೆಂಗಳೂರು : ಜಿಮ್ ಗಳಲ್ಲಿ ನೀಡುವ ಪ್ರೋಟಿನ್ ಪೌಡರ್ ಬಗ್ಗೆ ದೊಡ್ಡ ಚರ್ಚೆಯಾಗಿತ್ತು. ಪ್ರೊಟೀನ್ ಪೌಡರ್ ಸೈಡ್ ಎಫೆಕ್ಟ್ ನ ಅಸಲಿಯತ್ತಿಗೆ ಆರೋಗ್ಯ ಇಲಾಖೆ ಮುಂದಾಗಿದ್ದು, ಇನ್ನೊಂದು ವಾರದಲ್ಲಿ ಸ್ಯಾಂಪಲ್ ಟೆಸ್ಟಿಂಗ್ ರಿಪೋಟ್ ಔಟ್ ಆಗಲಿದೆ.
ಜಿಮ್ಗಳಲ್ಲಿ ಬಾಡಿ ಬಿಲ್ಡ್ ಗಾಗಿ ನೀಡುವ ಪ್ರೊಟೀನ್ ಪೌಡರ್ ಗಳು ಕಿಡ್ನಿ, ಲಿವರ್ ಸೇರಿದಂತೆ ದೇಹದಲ್ಲಿ ಅಡ್ಡ ಪರಿಣಾಮ ಉಂಟುಮಾಡುವ ಬಗ್ಗೆ ಅಂದು ಸದನದ ಶೂನ್ಯವೇಳೆಯಲ್ಲಿ ಸತೀಶ್ ರೆಡ್ಡಿ ಪ್ರಸ್ತಾಪಿಸಿದ್ರು.
ಇದರ ಬಗ್ಗೆ ಪರಿಶೀಲನೆ ಮಾಡುವ ಭರವಸೆಯನ್ನು ಆರೋಗ್ಯ ಇಲಾಖೆ ನೀಡಿತ್ತು. ಈಗಾಗಲೇ ಆಹಾರ ಸುರಕ್ಷತೆ ಅಧಿಕಾರಿಗಳು ಬೆಂಗಳೂರು ಜಿಮ್ಗೆ ತೆರಳಿ ಅಲ್ಲಿ ಬಳಕೆ ಮಾಡುವ ಪ್ರೊಟೀನ್ ಪೌಡರ್ ಸ್ಯಾಂಪಲ್ಸ್ ಸಂಗ್ರಹಿಸಿ ಸೆಂಟ್ರಲ್ ಲ್ಯಾಬ್ಗೆ ರವಾನಿಸಲಾಗಿದೆ.
ಇನ್ನೊಂದು ವಾರದಲ್ಲಿ ರಿಪೋರ್ಟ್ ಕೂಡ ಬರಬಹುದು ಅಂತಾ ಆರೋಗ್ಯ ಸಚಿವರು ಹೇಳಿದ್ದಾರೆ.