ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಆಘಾತ ನೀಡುವಂತಹ ವರದಿಯೊಂದು ಹೊರ ಬಿದ್ದಿದೆ.ದೇಶದಲ್ಲಿ ಅತ್ಯಂತ ಕೆಟ್ಟ ಆಡಳಿತವನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಇದೇ ಉತ್ತರ ಪ್ರದೇಶವು ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಇತ್ತೀಚಿನ ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕದ ಪ್ರಕಾರ, ಬೆಂಗಳೂರು ಮೂಲದ ಥಿಂಕ್-ಟ್ಯಾಂಕ್ ಸಾರ್ವಜನಿಕ ವ್ಯವಹಾರಗಳ ಕೇಂದ್ರವು ಸಿದ್ಧಪಡಿಸಿದ ರಾಜ್ಯಗಳ ಆಡಳಿತದ ಅಳತೆಗೋಲಿನ ಪ್ರಕಾರ, ಕಳಪೆ ಗುಣಮಟ್ಟದ ಆಡಳಿತದಿಂದಾಗಿ ಉತ್ತರ ಪ್ರದೇಶವು ಪಟ್ಟಿಯಲ್ಲಿ ಕೊನೆಯ(18ನೇ) ಸ್ಥಾನವನ್ನು ಪಡೆದುಕೊಂಡಿದೆ. ಕಳೆದ 2016ರಲ್ಲಿ, PAC ಶ್ರೇಯಾಂಕಗಳ ಮೊದಲ ಆವೃತ್ತಿಯನ್ನು ಪ್ರಾರಂಭಿಸಿದಾಗ ಉತ್ತರ ಪ್ರದೇಶವು 12ನೇ ಸ್ಥಾನದಲ್ಲಿತ್ತು.