ಭಾರತದೊಂದಿಗೆ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ತನ್ನ ಹಕ್ಕುಗಳನ್ನು ಒತ್ತಿಹೇಳಲು ಚೀನಾ ಒತ್ತಡ ಮತ್ತು ಯುದ್ಧತಂತ್ರದ ಕ್ರಮಗಳನ್ನು ಅನುಸರಿಸುತ್ತಿದೆ.ಮತ್ತು ಬಿಕ್ಕಟ್ಟಿನ ಸಮಯದಲ್ಲಿ ಹಾಗೂ ನಂತರದ ಸಮಯದಲ್ಲಿ ಭಾರತದ ಜೊತೆಗಿನ ತನ್ನ ಸಂಬಂಧ ಗಾಢವಾಗದಂತೆ ತಡೆಯಲು ವಿಫಲವಾಗಿದೆ ಅಂತ ಚೀನಾದ ಮಿಲಿಟರಿ ಆಧುನೀಕರಣ ಬಗ್ಗೆ ಪ್ರಮುಖ ವರದಿಯಲ್ಲಿ ಅಮೆರಿಕ ಹೇಳಿದೆ. ತೈವಾನ್ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಚೀನಾ ನಡುವಿನ ಉದ್ವಿಗ್ನತೆಯ ನಡುವೆ ಪೆಂಟಗನ್ ವರದಿ ಬಂದಿದೆ. ಮತ್ತು ತೈವಾನ್ ಅನ್ನು ರಕ್ಷಿಸುವ ಸಾಮರ್ಥ್ಯ ಅಮೆರಿಕ ಸೇನೆಗೆ ಇದೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ ಅಂತ ಅಮೆರಿಕ ಸಶಸ್ತ್ರ ಪಡೆಗಳ ಮುಖ್ಯಸ್ಥ ಜಾಯಿಂಟ್ ಚೀಫ್ಸ್ ಚೇರ್ಮನ್ ಮಾರ್ಕ್ ಮಿಲೆ ಹೇಳಿದ್ದಾರೆ.