Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಿಧಾನಸಭೆಯಲ್ಲಿ ಭದ್ರತಾ ಲೋಪ: ಬಜೆಟ್ ಮಂಡನೆ ವೇಳೆ ಸಮಯದಲ್ಲಿ ನಡೆದದ್ದಾದ್ರು ಏನು?

ವಿಧಾನಸಭೆಯಲ್ಲಿ ಭದ್ರತಾ ಲೋಪ: ಬಜೆಟ್ ಮಂಡನೆ ವೇಳೆ ಸಮಯದಲ್ಲಿ ನಡೆದದ್ದಾದ್ರು ಏನು?
ಬೆಂಗಳೂರು , ಶುಕ್ರವಾರ, 7 ಜುಲೈ 2023 (15:03 IST)
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು( ಜುಲೈ 07) ಬಜೆಟ್ ಮಂಡನೆ ವೇಳೆ ಭದ್ರತಾ ಲೋಪವಾಗಿದೆ. ಶಾಸಕರಲ್ಲದ ವ್ಯಕ್ತಿಯೋರ್ವ ವಿಧಾನಸಭೆ ಪ್ರವೇಶಿಸಿದ್ದಾನೆ.
 
ಅಲ್ಲದೇ ಬಜೆಟ್ ಮಂಡನೆ ವೇಳೆ ಸಮಾರು 15 ನಿಮಿಷಗಳ ಜಾಲ ದೇವದುರ್ಗ ಶಾಸಕಿ ಕರೆಯಮ್ಮ ಆಸನದಲ್ಲಿ ಕುಳಿತಿದ್ದಾನೆ. ಇದನ್ನು ಗಮನಿಸಿದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರಿಗೆ ವ್ಯಕ್ತಿ ಬಗ್ಗೆ ಅನುಮಾನ ಬಂದಿದೆ.

ಕೂಡಲೇ  ಅವರು ಎದ್ದು ಹೋಗಿ ಸ್ಪೀಕರ್ ಯುಟಿ ಖಾದರ್ ಅವರ ಗಮನಕ್ಕೆ ತಂದಿದ್ದಾರೆ. ಆದ್ರೆ, ಅಷ್ಟರೊಳಗೆ ಆ ಅನಾಮಿಕ ವ್ಯಕ್ತಿ ಅಲ್ಲಿಂದ ನಾಪತ್ತೆಯಾಗಿದ್ದಾನೆ. ಇದರಿಂದ ಆ ವ್ಯಕ್ತಿ ಯಾರು? ಏಕೆ ಬಂದಿದ್ದ? ಇಷ್ಟೊಂದು ಭದ್ರತೆ ನಡುವೆಯೂ ಆ ವ್ಯಕ್ತಿ ಹೇಗೆ ಸದನದೊಳಗೆ ಪ್ರವೇಶಿಸಿದ್ದ ಅಂತೆಲ್ಲ ಪ್ರಶ್ನೆಗಳು ಉದ್ಭವಿಸಿವೆ. ಹಾಗೇ ಆತಂಕಕ್ಕೂ ಕಾರಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸದ್ಯಕ್ಕೆ ನಾನೇ ವಿರೋಧ ಪಕ್ಷದ ನಾಯಕ ಎಂದ ಸೋಮಶೇಖರ್