Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಶ್ರೀರಂಗಪಟ್ಟಣದಾದ್ಯಂತ 144 ಸೆಕ್ಷನ್ ಜಾರಿ

ಶ್ರೀರಂಗಪಟ್ಟಣದಾದ್ಯಂತ 144 ಸೆಕ್ಷನ್ ಜಾರಿ
ಮಂಡ್ಯ , ಶನಿವಾರ, 4 ಜೂನ್ 2022 (09:33 IST)
ಮಂಡ್ಯ : ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಅಲ್ಲ, ಹನುಮಾನ್ ಮಂದಿರ ಅಂತ ಪಟ್ಟು ಹಿಡಿದಿರುವ ಹಿಂದೂ ಸಂಘಟನೆಗಳು ಇಂದು `ಶ್ರೀರಂಗಪಟ್ಟಣ ಚಲೋ’ ಹಮ್ಮಿಕೊಂಡಿವೆ.
 
ಬೆಳಗ್ಗೆ 10:30ಕ್ಕೆ ಶ್ರೀರಂಗಪಟ್ಟಣದ ಕುವೆಂಪು ಪ್ರತಿಮೆಯಿಂದ ಜಾಮಿಯಾ ಮಸೀದಿವರಗೆ ಶಾಂತಿಯುತವಾಗಿ ಮೆರವಣಿಗೆ ನಡೆಸ್ತೇವೆ. ಮಸೀದಿಯ ಒಳಭಾಗಕ್ಕೆ ಹನುಮ ಭಕ್ತರು ಹೋಗಿ ಆಂಜನೇಯಸ್ವಾಮಿಯ ಪೂಜೆ ಮಾಡ್ತೇವೆ ಎಂದು ಹಿಂದೂ ಸಂಘಟನೆ ನಾಯಕರು ಹೇಳ್ತಿದ್ದಾರೆ.

ಒಂದೊಮ್ಮೆ, ಮೆರವಣಿಗೆ ಮಾಡಲು ಪೊಲೀಸರು ಅವಕಾಶ ನೀಡದಿದ್ದಲ್ಲಿ ಕುವೆಂಪು ಪ್ರತಿಮೆಯ ಬಳಿ ಕೂತು ಹನುಮಾನ್ ಚಾಲಿಸ್ ಪಠಣೆ ಮಾಡುವುದಾಗಿಯೂ ನಿರ್ಧಾರ ಮಾಡಿವೆ.

ಈ ಹೋರಾಟದಲ್ಲಿ ಮಂಡ್ಯ, ಮೈಸೂರು ಭಾಗದಿಂದ ಸಾವಿರಾರು ಹನುಮ ಭಕ್ತರು ಮಾಲೆ ಧರಿಸಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸಬಾರದೆಂದು ಜಿಲ್ಲಾಡಳಿತ ಶ್ರೀರಂಗಪಟ್ಟಣದಾದ್ಯಂತ 144 ಸೆಕ್ಷನ್ ಜಾರಿ ಮಾಡಿದೆ.

ಭಾರೀ ಪ್ರಮಾಣದಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ. ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವರ್ ತಡರಾತ್ರಿ ಶ್ರೀರಂಗಪಟ್ಟಣಕ್ಕೆ ಭೇಟಿ ಕೊಟ್ಟು, ಎಸ್ಪಿ ಯತೀಶ್ರಿಂದ ಭದ್ರತಾ ವ್ಯವಸ್ಥೆಯ ಮಾಹಿತಿ ಪಡೆದರು. 

ಸದ್ಯ ಶ್ರೀರಂಗಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ವಿಎಚ್ಪಿಯಿಂದ ಪ್ರತಿಭಟನಾ ಮೆರವಣಿಗೆ ವಿಫಲಗೊಳಿಸಲು ಪೊಲೀಸರ ಸನ್ನದ್ದ ಮಾಡಿಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಇರುವೆ ಕಡಿತಕ್ಕೆ ಮೂರು ದಿನ ಮಗು ಆಸ್ಪತ್ರೆಯಲ್ಲೇ ಸಾವು