ಶಾಲೆಗಳತ್ತ ಮಕ್ಕಳು ಮುಖ ಮಾಡಿರುವ ಈ ಸಮಯದಲ್ಲಿ ಮಕ್ಕಳ ಕೊರೊನಾ ಲಸಿಕೆ ಸಂಬಂಧ ಮಹತ್ವದ ಸುದ್ದಿ ಹೊರ ಬಿದ್ದಿದೆ. ZyCoV-D ಬಳಿಕ ಮತ್ತೊಂದು ಮಕ್ಕಳ ಲಸಿಕೆಗೆ ಅನುಮತಿ ಸಿಕ್ಕಿದೆ.
ಔಷಧ ನಿಯಂತ್ರಕದ ವಿಷಯ ತಜ್ಞರ ಸಮಿತಿಯು (
SEC) 2ರಿಂದ 18 ವರ್ಷದೊಳಗಿನ ಮಕ್ಕಳಿಗೆ ಭಾರತ್ ಬಯೋಟೆಕ್ ಸಂಸ್ಥೆಯ ಕೊವಾಕ್ಸಿನ್ ಲಸಿಕೆಗೆ ತುರ್ತು ಬಳಕೆಯ ಅಧಿಕಾರವನ್ನು ನೀಡುವಂತೆ ಶಿಫಾರಸು ಮಾಡಿದೆ. ಅಂತಿಮ ಅನುಮೋದನೆಗಾಗಿ ಎಸ್ ಇಸಿ ತನ್ನ ಶಿಫಾರಸನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (
DCGI) ಗೆ ಸಲ್ಲಿಸಿದೆ. ವಿವರವಾದ ಚರ್ಚೆಯ ನಂತರ, ತುರ್ತು ಪರಿಸ್ಥಿತಿಯಲ್ಲಿ ಬಳಕೆಗಾಗಿ ಲಸಿಕೆಯ ಮಾರುಕಟ್ಟೆ ಅನುಮೋದನೆಯನ್ನು ನೀಡಲು ಸಮಿತಿಯು ಶಿಫಾರಸು ಮಾಡಿದೆ ಎಂದು ತಜ್ಞರ ಸಮಿತಿಯು ಹೇಳಿಕೆಯಲ್ಲಿ ತಿಳಿಸಿದೆ. ಆದಾಗ್ಯೂ, ತುರ್ತು ಬಳಕೆಯ ಅಧಿಕಾರವು ನಾಲ್ಕು ಷರತ್ತುಗಳನ್ನು ಒಳಗೊಂಡಿದೆ.
ತಜ್ಞರ ಸಮಿತಿಯ ಷರತ್ತುಗಳು ಹೀಗಿವೆ
*ಸಂಸ್ಥೆಯು ಅಪ್ಡೇಟ್ ಮಾಡಿದ ಪ್ರಿಸ್ಕ್ರೈಬಿಂಗ್ ಮಾಹಿತಿ/ಪ್ಯಾಕೇಜ್ ಇನ್ಸರ್ಟ್ (PI), ಉತ್ಪನ್ನ ಗುಣಲಕ್ಷಣಗಳ ಸಾರಾಂಶ (SmPC) ಮತ್ತು ಫ್ಯಾಕ್ಶೀಟ್ ಅನ್ನು ಒದಗಿಸಬೇಕು;
*ಸಂಸ್ಥೆಯು AEFI ಮತ್ತು AESI ದತ್ತಾಂಶವನ್ನು ಒಳಗೊಂಡಂತೆ ಸುರಕ್ಷತಾ ಡೇಟಾವನ್ನು ಸಲ್ಲಿಸಬೇಕು
*ಸರಿಯಾದ ವಿಶ್ಲೇಷಣೆಯೊಂದಿಗೆ, ಮೊದಲ 15 ತಿಂಗಳಿಗೊಮ್ಮೆ ಪ್ರತಿ 15 ದಿನಗಳಿಗೊಮ್ಮೆ ಮತ್ತು ನಂತರ ಮಾಸಿಕ ವರದಿ ನೀಡಬೇಕು.
*ಹೊಸ ಔಷಧಗಳು ಮತ್ತು ಚಿಕಿತ್ಸಾ ಪ್ರಯೋಗಗಳ ನಿಯಮಗಳಾದ 2019 ರ ಅಗತ್ಯತೆಗಳ ಪ್ರಕಾರ ಸಂಸ್ಥೆಯು ಅಪಾಯ ನಿರ್ವಹಣಾ ಯೋಜನೆಯನ್ನು ಸಲ್ಲಿಸಬೇಕು.
28 ದಿನಗಳ ಅಂತರದಲ್ಲಿ ಮಕ್ಕಳಿಗೆ 2 ಡೋಸ್
ಭಾರತ್ ಬಯೋಟೆಕ್ ಕಳೆದ ವಾರ ಮಕ್ಕಳ ಮೇಲಿನ ಕ್ಲಿನಿಕಲ್ ಪ್ರಯೋಗಗಳ ಡೇಟಾವನ್ನು ಡಿಸಿಜಿಐಗೆ ಪರಿಶೀಲನೆಗಾಗಿ ಮತ್ತು ತುರ್ತು ಬಳಕೆಯ ಅನುಮೋದನೆಗಾಗಿ ಸಲ್ಲಿಸಿತ್ತು. ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ 2-18 ವಯೋಮಾನದವರಿಗೆ ಕೋವಿಡ್ -19 ಲಸಿಕೆಗಳಿಗಾಗಿ ವಿಶ್ವದ ಮೊದಲ ಅನುಮೋದನೆ ಪಡೆದ ಲಸಿಕೆಯಾಗಿದೆ. 28 ದಿನಗಳ ಅಂತರದಲ್ಲಿ ಮಕ್ಕಳಿಗೆ ಎರಡು ಡೋಸ್ ಕೋವಾಕ್ಸಿನ್ ನೀಡಲಾಗುವುದು. ವಯಸ್ಕರಿಗೆ, ಸರ್ಕಾರವು ಎರಡು ಡೋಸ್ಗಳ ನಡುವೆ 4-6 ವಾರಗಳ ಅಂತರವನ್ನು ನಿಗದಿಪಡಿಸಿದೆ.
ಅನುಮತಿ ಪಡೆದ 2ನೇ ಲಸಿಕೆ
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಹಯೋಗದಲ್ಲಿ ಭಾರತ್ ಬಯೋಟೆಕ್ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೊವಾಕ್ಸಿನ್ ಅನ್ನು ಭಾರತದಲ್ಲಿ ನಡೆಯುತ್ತಿರುವ ಕೋವಿಡ್ -19 ಲಸಿಕೆ ಅಭಿಯಾನದಲ್ಲಿ ವಯಸ್ಕರಿಗೆ ಬಳಸಲಾಗುತ್ತಿದೆ. ಇದು ಭಾರತದಲ್ಲಿ ಮಕ್ಕಳಿಗೆ ಅನುಮೋದನೆ ಪಡೆದ ಎರಡನೇ COVID-19 ಲಸಿಕೆಯಾಗಿದೆ. DGCI, ಆಗಸ್ಟ್ನಲ್ಲಿ, ZyCoV-D ಅನ್ನು 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಹಾಗೂ ವಯಸ್ಕರಿಗೆ ಅನುಮೋದಿಸಿತ್ತು. ಆದರೆ ಮಕ್ಕಳಿಗೆ ಲಸಿಕಾ ವಿತರಣೆ ಇನ್ನೂ ಆರಂಭವಾಗಿಲ್ಲ.