Publish Date: Mon, 07 Mar 2022 (14:46 IST)
Updated Date: Mon, 07 Mar 2022 (18:50 IST)
ಕೀವ್ : ಉಕ್ರೇನ್ನ ವಿನ್ನಿಟ್ಸಿಯಾ ವಿಮಾನ ನಿಲ್ದಾಣದ ಮೇಲೆ ರಷ್ಯಾ ನಡೆಸಿದ ವೈಮಾನಿಕ ಬಾಂಬ್ ದಾಳಿಗೆ 9 ಮಂದಿ ಬಲಿಯಾಗಿದ್ದಾರೆ.
ದಾಳಿಯಲ್ಲಿ ಅನೇಕರು ಗಂಭೀರ ಗಾಯಗೊಂಡಿದ್ದಾರೆ. ಉಕ್ರೇನಿಯನ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿ 15 ಮಂದಿಯನ್ನು ರಕ್ಷಿಸಿದ್ದಾರೆ. ಮೃತಪಟ್ಟವರಲ್ಲಿ ಐವರು ನಾಯಕರು ಹಾಗೂ ನಾಲ್ವರು ಯೋಧರಾಗಿದ್ದಾರೆ.
ದಾಳಿ ಕುರಿತು ಮಾತನಾಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಉಕ್ರೇನ್ ಮೇಲೆ ಹಾರಾಟ ನಿಷೇಧ ವಲಯವನ್ನು ರೂಪಿಸಿ ಎಂದು ನಾನು ಐರೋಪ್ಯ ರಾಷ್ಟ್ರಗಳಲ್ಲಿ ಮತ್ತೆ ಕೇಳುತ್ತಿದ್ದೇನೆ. ರಷ್ಯಾದ ಕ್ಷಿಪಣಿಗಳ ದಾಳಿ ಮಾಡದಂತೆ ಹಾರಾಟ ನಿಷೇಧ ವಲಯ ರೂಪಿಸಿ ಎಂದು ಒತ್ತಾಯಿಸಿದ್ದಾರೆ.