Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಧಿಡೀರ್ ಕೊರೊನಾ ಏರಿಕೆ: ಆರೋಗ್ಯ ವ್ಯವಸ್ಥೆ ಕುಸಿದುಬೀಳಬಹುದು!

ಧಿಡೀರ್ ಕೊರೊನಾ ಏರಿಕೆ: ಆರೋಗ್ಯ ವ್ಯವಸ್ಥೆ ಕುಸಿದುಬೀಳಬಹುದು!
ನವದೆಹಲಿ , ಗುರುವಾರ, 6 ಜನವರಿ 2022 (08:39 IST)
ಭಾರತಕ್ಕೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂದಿನ ಎರಡು ವಾರಗಳು ನಿರ್ಣಾಯಕ ಎಂದು ಆರೋಗ್ಯ ಕ್ಷೇತ್ರದ ತಜ್ಞರು ಹೇಳಿದ್ದಾರೆ.

ಭಾರತದಲ್ಲಿ ಕೊರೊನಾ ಕೇಸ್ ಹೇಗೆ ಏರಿಕೆಯಾಗುತ್ತಾವೆ ಇಲ್ಲವೇ ನಿಯಂತ್ರಣಕ್ಕೆ ಬರುತ್ತಾವೆಯೇ ಎಂಬುದು ಮುಂದಿನ ಎರಡು ವಾರಗಳಲ್ಲಿ ಸ್ಪಷ್ಟವಾಗಲಿದೆ.

ದೇಶವು ಏನೇ ಸಿದ್ದತೆ ಮಾಡಿಕೊಂಡಿದ್ದರೂ, ಧಿಡೀರನೇ ಕೊರೊನಾ ಕೇಸ್ ಏರಿಕೆಯಾದರೇ, ಆರೋಗ್ಯ ವ್ಯವಸ್ಥೆಯೇ ಕುಸಿದುಬೀಳಬಹುದು ಎಂಬ ಭೀತಿಯು ತಜ್ಞರು, ಜನರನ್ನು ಕಾಡುತ್ತಿದೆ.

ಕೋವಿಡ್ -19 ರ ಇತ್ತೀಚಿನ ಹಂತದ ವಿರುದ್ಧದ ಹೋರಾಟದಲ್ಲಿ ಮುಂದಿನ ಎರಡು ವಾರಗಳು ನಿರ್ಣಾಯಕ ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಹೇಳಿದ್ದಾರೆ. ಏಕೆಂದರೆ ಮುಂಬರುವ ದಿನಗಳಲ್ಲಿ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಕೊರೊನಾ ಕೇಸ್ ಏರಿಕೆಯನ್ನು ಆರೋಗ್ಯ ಕ್ಷೇತ್ರದ ತಜ್ಞರು ನಿರೀಕ್ಷಿಸಿದ್ದಾರೆ.

ಭಾರತದಲ್ಲಿ ದೊಡ್ಡ ಮಟ್ಟದ ಕೊರೊನಾ ಕೇಸ್ ಏರಿಕೆಯ ಬಗ್ಗೆ ಮುಂದಿನ ಎರಡು ವಾರಗಳಲ್ಲಿ ನಮಗೆ ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು Wಊಔ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತಕ್ಕೆ ಎಚ್ಚರಿಕೆಯ ಗಂಟೆಯಾಯ್ತ!?