Publish Date: Thu, 27 Jan 2022 (06:43 IST)
Updated Date: Thu, 27 Jan 2022 (08:45 IST)
ನವದೆಹಲಿ : ಭಾರತದಿಂದ ಬೇರೆ ದೇಶಗಳಿಗೆ ಕೂದಲು ರಫ್ತು ಮಾಡುವುದಕ್ಕೆ ವಿದೇಶಿ ವ್ಯವಹಾರಗಳ ಮಹಾ ನಿರ್ದೇಶನಾಲಯ ಕೆಲವು ನಿರ್ಬಂಧ ಹೇರಿದೆ.
ಪರವಾನಗಿ ಇರುವವರು ಅಥವಾ ಡಿಜಿಎಫ್ಟಿಯಿಂದ ಅನುಮತಿ ಪಡೆದವರು ಮಾತ್ರವೇ ಕೂದಲು ರಪ್ತು ಮಾಡಬಹುದು. ಕೂದಲಿನ ಕಳ್ಳಸಾಗಣೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಾಗಿದೆ.
ರಫ್ತುದಾರರು ಭಾರತದ ಹೊರಗೆ ಕೂದಲಿನ ಸಾಗಣೆಯನ್ನು ಕಳುಹಿಸಲು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯದಿಂದ ಅನುಮತಿ ಅಥವಾ ಪರವಾನಗಿಯನ್ನು ಪಡೆಯಬೇಕಾಗುತ್ತದೆ ಎಂದು ಡಿಜಿಎಫ್ಟಿ ತಿಳಿಸಿದೆ.
ದೇಶದಲ್ಲಿ ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳನಾಡು ಅತಿ ಹೆಚ್ಚು ಕೂದಲು ರಪ್ತು ಮಡುವ ರಾಜ್ಯಗಳಾಗಿವೆ. ಭಾರತ ಈ ಆರ್ತೀಕ ವರ್ಷದ ಏಪ್ರಿಲ್-ನವೆಂಬರ್ ಅವಧಿಯಲ್ಲಿ 1 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಕೂದಲು ರಫ್ತು ಮಾಡಿದೆ.