ನವದೆಹಲಿ : ಕರ್ತವ್ಯಪಥದಲ್ಲಿ ನಡೆಯಲಿರುವ ಗಣರಾಜೋತ್ಸವದ ಪರೇಡ್ನಲ್ಲಿ ಭಾಗಿಯಾಗಲು ರಾಜ್ಯದ ಸ್ತಬ್ಧಚಿತ್ರ ಒಂದೇ ವಾರದಲ್ಲಿ ಸಿದ್ಧವಾಗುತ್ತಿದೆ.
ನಾರಿ ಶಕ್ತಿ ಪರಿಕಲ್ಪನೆಯ ಟ್ಯಾಬ್ಲೊವನ್ನು ಕೇವಲ ಎಂಟು ದಿನಗಳಲ್ಲಿ ನಿರ್ಮಿಸಲಾಗಿದ್ದು, ಇದೀಗ ಅಂತಿಮ ಹಂತದ ಕೆಲಸಗಳು ನಡೆಯುತ್ತಿದೆ. ಪರೇಡ್ನಲ್ಲಿ ಕರ್ನಾಟಕದ ಕಲಾ ತಂಡ ಕೂಡ ಭಾಗಿಯಾಗುತ್ತಿದೆ.
ಕೊಪ್ಪಳ ಚಿತ್ರದುರ್ಗ, ಬೆಂಗಳೂರಿನ 18 ಮಂದಿ ನಂದಿ ಧ್ವಜ ಕುಣಿತದ ಕಲಾವಿದರು ಈ ಬಾರಿಯ ಪರೇಡ್ನಲ್ಲಿ ಭಾಗಿಯಾಗುತ್ತಿದ್ದಾರೆ. ಈ ಮಧ್ಯೆ, ಟ್ಯಾಬ್ಲೋ ವಿಚಾರದಲ್ಲಿ ಅನಪೇಕ್ಷಿತ ರಾಜಕೀಯ ಕೂಡ ನಡೆದಿದೆ.
ಕೊನೆ ಹಂತದಲ್ಲಿ ರಾಜ್ಯದ ಟ್ಯಾಬ್ಲೋಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದನ್ನು ನಾಟಕ. ಚುನಾವಣೆ ಗಿಮಿಕ್ ಎಂದು ಡಿಕೆಶಿವಕುಮಾರ್ ಇತ್ತೀಚಿಗೆ ಟೀಕಿಸಿದರು. ಇದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.