Publish Date: Sat, 30 Jul 2022 (15:45 IST)
Updated Date: Sat, 30 Jul 2022 (15:49 IST)
ಜೋಹಾನ್ಸ್ಬರ್ಗ್ : ಮ್ಯೂಸಿಕ್ ವೀಡಿಯೋ ಶೂಟ್ ವೇಳೆ 8 ಮಹಿಳಾ ರೂಪದರ್ಶಿಗಳ ಸಾಮೂಹಿಕ ಅತ್ಯಾಚಾರವಾಗಿರುವ ಆಘಾತಕಾರಿ ಪ್ರಕರಣ ದಕ್ಷಿಣ ಆಫ್ರಿಕಾದಲ್ಲಿ ವರದಿಯಾಗಿದೆ.
ಪೊಲೀಸ್ ಸಚಿವ ಭೆಕಿ ಸೆಲೆ ಈ ಕುರಿತು ಪ್ರತಿಕ್ರಿಯೆ ಕೊಟ್ಟಿದ್ದು, ಬಂದೂಕುಧಾರಿಗಳ ತಂಡವೊಂದು ಮ್ಯೂಸಿಕ್ ವೀಡಿಯೋ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿದೆ.
ಈ ವೇಳೆ ಅಲ್ಲಿದ್ದ ಎಂಟು ರೂಪದರ್ಶಿಗಳನ್ನು ಬಲವಂತವಾಗಿ ಎಳೆದುಕೊಂಡು ಹೋಗಿದ್ದಾರೆ. ಜೋಹಾನ್ಸ್ಬರ್ಗ್ನ ಪಶ್ಚಿಮದಲ್ಲಿರುವ ಸಣ್ಣ ಪಟ್ಟಣವಾದ ಕ್ರುಗರ್ಸ್ಡಾರ್ಪ್ನ ಹೊರವಲಯದಲ್ಲಿ ಅತ್ಯಾಚಾರ ಮಾಡಿದ್ದಾರೆ ಎಂದು ವಿವರಿಸಿದ್ದಾರೆ.
ದಾಳಿಗೆ ಸಂಬಂಧಿಸಿದಂತೆ ಇದುವರೆಗೆ ಸುಮಾರು 20 ಶಂಕಿತರಲ್ಲಿ, ಮೂವರನ್ನು ಭದ್ರತಾ ಪಡೆ ಬಂಧಿಸಿದೆ. ಆರೋಪಿಗಳು ವಿದೇಶಿ ಪ್ರಜೆಗಳಂತೆ ಕಾಣುತ್ತಿದ್ದು, ಮೂಲತಃ ಅವರನ್ನು ಜಮಾಗಳು ಎಂದು ಕರೆಯಲಾಗುತ್ತೆ. ಇವರು ಅಕ್ರಮವಾಗಿ ಗಣಿಗಳನ್ನು ಬಳಸಿಕೊಳ್ಳುವ ಜನರು ಎಂದು ತಿಳಿಸಿದ್ದಾರೆ.