ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಗೆ ಭೇಟಿ ಕೊಡುವ ಪ್ರವಾಸಿಗರು ಈ ರಸ್ತೆಯನ್ನು ನೋಡದೆ ಇರಲು ಸಾಧ್ಯವೇ ಇಲ್ಲ.
ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ಗೆ ಸಂಪರ್ಕಿಸುವ ಐಕಾನಿಕ್ ರಸ್ತೆ ರಾಜಪಥ್. ಪ್ರತಿ ವರ್ಷ ಗಣರಾಜೋತ್ಸವದ ಕೇಂದ್ರಬಿಂದುವಾಗುವ ಈ ಪ್ರಮುಖ ರಸ್ತೆಯ ಹೆಸರು ಬದಲಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ.
ಬುಧವಾರ ನವೀಕರಿಸಿದ ಸೆಂಟ್ರಲ್ ವಿಸ್ಟಾ ಅವೆನ್ಯೂವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದು, ಇದೇ ವೇಳೆ ರಾಜಪಥ್ ರಸ್ತೆಯ ಹೆಸರನ್ನು ಕರ್ತವ್ಯ ಪಥ್ ಎಂದು ಬದಲಿಸಲಾಗುವುದು ಎಂದು ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಹೇಳಿದೆ.
ಈ ಮೂಲಕ ನೂರು ವರ್ಷಗಳ ಇತಿಹಾಸವಿರುವ ಈ ರಸ್ತೆಗೆ ಎರಡನೇ ಬಾರಿಗೆ ಮರು ನಾಮಕರಣವಾಗಲಿದೆ.