Publish Date: Tue, 14 Aug 2018 (08:58 IST)
Updated Date: Tue, 14 Aug 2018 (09:02 IST)
ಮಂಗಳೂರು: ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಭೂ ಕುಸಿತ, ಸೇತುವೆ ಮುಳುಗಡೆ ಸಮಸ್ಯೆ ಸಾಮಾನ್ಯವಾಗಿದೆ. ಮಳೆಯ ಇಫೆಕ್ಟ್ ಇದೀಗ ಸಿಎಂ ಕುಮಾರಸ್ವಾಮಿ ಮೇಲೂ ತಟ್ಟಿದೆ.
ದ.ಕ. ಜಿಲ್ಲೆಯಲ್ಲಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯಗಳಿಗೆ ಭೇಟಿ ನೀಡಿರುವ ಸಿಎಂ ಕುಮಾರಸ್ವಾಮಿ ಮಾರ್ಗ ಮಧ್ಯೆ ಮಳೆಯಿಂದಾಗಿ ಸಂಕಷ್ಟಕ್ಕೀಡಾಗಬೇಕಾಯಿತು.
ಇಂದು ಬೆಳಿಗ್ಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಕುಟುಂಬ ಸಮೇತರಾಗಿ ಭೇಟಿ ಮಾಡಿರುವ ಕುಮಾರಸ್ವಾಮಿ ಮಳೆಯಿಂದಾಗಿ ಬದಲಿ ಮಾರ್ಗದಲ್ಲಿ ಸಂಚರಿಸಬೇಕಾಯಿತು. ಮಳೆಗೆ ಪುತ್ತೂರು ಬಳಿ ಉದನೆ ಎಂಬಲ್ಲಿ ಮಾರ್ಗ ಸಂಚಾರ ಬಂದ್ ಆಗಿರುವುದರಿಂದ ಸುಳ್ಯ, ಜಾಲ್ಸೂರು ಮಾರ್ಗವಾಗಿ ಸಿಎಂ ಸುಬ್ರಹ್ಮಣ್ಯಕ್ಕೆ ಪ್ರಯಾಣಿಸಿದರು. ಇಂದು ಸುಬ್ರಹ್ಮಣ್ಯದಲ್ಲಿ ಕುಟುಂಬ ಸಮೇತರಾಗಿ ಎಚ್ ಡಿಕೆ ಆಶ್ಲೇಷ ಬಲಿ ಪೂಜೆ ನೆರವೇರಿಸಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.