Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಾಳೆ ಸಂಜೆ ಪಿಯು ಫಲಿತಾಂಶ ಪ್ರಕಟ; ರಿಸಲ್ಟ್ ನೋಡಲು ಹೀಗೆ ಮಾಡಿ...!

ನಾಳೆ ಸಂಜೆ ಪಿಯು ಫಲಿತಾಂಶ ಪ್ರಕಟ; ರಿಸಲ್ಟ್ ನೋಡಲು ಹೀಗೆ ಮಾಡಿ...!
Bangalore , ಸೋಮವಾರ, 19 ಜುಲೈ 2021 (13:23 IST)
ಬೆಂಗಳೂರು(ಜು.19): ಕೊರೋನಾ ಕಾರಣದಿಂದಾಗಿ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೆ ಪಾಸ್ ಮಾಡಿದ್ದ ಶಿಕ್ಷಣ ಇಲಾಖೆ, ನಾಳೆ ಫಲಿತಾಂಶ ಪ್ರಕಟ ಮಾಡಲಿದೆ. ಜು.20ರ ಸಂಜೆ 4.30ಕ್ಕೆ ದ್ವಿತೀಯ ಪಿಯು ರಿಸಲ್ಟ್ ರಿಲೀಸ್ ಆಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಈ ಬಾರಿ  ಗ್ರೇಡ್ ಬದಲಿಗೆ ಅಂಕಗಳ ಆಧಾರದ ಮೇಲೆ ಫಲಿತಾಂಶ ಹೊರಬೀಳಲಿದೆ.

ಅಂಕ ಕೊಡಲು ಎಸ್ಎಸ್ಎಲ್ಸಿ ಮತ್ತು ಪ್ರಥಮ ಪಿಯುಸಿ ಮಾರ್ಕ್ಸ್ನ್ನೂ ಗಣನೆಗೆ ತೆಗೆದುಕೊಳ್ಳುವುದಾಗಿ ಹೇಳಿತ್ತು. ಅಂತೆಯೇ ಈಗ ಪಿಯುಸಿ ಫಲಿತಾಂಶ ಪ್ರಕಟ ಮಾಡಲು ಮುಹೂರ್ತ ಫಿಕ್ಸ್ ಆಗಿದೆ.
ಎಸ್ಎಸ್ಎಲ್ಸಿ ಮೊದಲ ಪರೀಕ್ಷೆಯ ಮರುದಿನವೇ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ. ಇಂದು 10ನೇ ತರಗತಿ ಮೊದಲ ಪರೀಕ್ಷೆ ನಡೆಯುತ್ತಿದೆ. ನಾಳೆ ಅಂದರೆ ಜು.20ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ.
ಈ ಬಾರಿ ಯಾವುದೇ ರ್ಯಾಂಕ್ ಇರುವುದಿಲ್ಲ. ಸಿಬಿಎಸ್ಇ ಮಾದರಿಯಲ್ಲಿ ಎಸ್ಎಸ್ಎಲ್ಸಿ, ಪ್ರಥಮ ಪಿಯು ಅಂಕಗಳನ್ನು ಪರಿಗಣಿಸಿ ಫಲಿತಾಂಶ ನೀಡಲಾಗುತ್ತದೆ. ಗ್ರೇಡ್ ಬದಲು ಅಂಕಗಳ ಆಧಾರದಲ್ಲಿ ದ್ವಿತೀಯ ಪಿಯು ಫಲಿತಾಂಶವನ್ನು ಕೊಡಲಾಗುತ್ತದೆ.
ಯಾವುದೇ ಗೊಂದಲಗಳಾಗದಂತೆ ಫಲಿತಾಂಶ ನೀಡಲು ಶಿಕ್ಷಣ ಇಲಾಖೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಪರೀಕ್ಷೆ ಇಲ್ಲದೇ ಫಲಿತಾಂಶ ಪ್ರಕಟಕ್ಕೆ ಪಿಯು ಬೋರ್ಡ್ ಸಿದ್ದತೆ ಮಾಡಿಕೊಂಡಿದೆ. ಆದರೆ ಇನ್ನೂ ಸಹ ಫಲಿತಾಂಶ ಹೇಗೆ ನೀಡಬೇಕು ಎಂಬ ಗೊಂದಲ ಬಗೆಹರಿದಿಲ್ಲ. ದೊಡ್ಡ ಸವಾಲೊಂದು ಪಿಯು ಬೋರ್ಡ್ ಮುಂದಿದೆ. ಹಾಗಿದ್ರೆ ಪಿಯು ಬೋರ್ಡ್ ಮುಂದಿರುವ ಆ ದೊಡ್ಡ ಸವಾಲು ಯಾವುದು ಅಂತೀರಾ? ಪ್ರತೀ ವರುಷ ಪರೀಕ್ಷೆಗೆ ಕೊಟ್ಟ ರಿಜಿಸ್ಟರ್ ನಂಬರ್ ಮೇಲೆ ಫಲಿತಾಂಶ ಸಿಗುತ್ತಿತ್ತು. ಅಂದರೆ ಪಿಯು ಬೋರ್ಡ್ ವೆಬ್ಸೈಟ್ಗೆ ಹೋಗಿ ವಿದ್ಯಾರ್ಥಿಯ ರಿಜಿಸ್ಟರ್ ನಂಬರ್ ಹಾಕಿದರೆ ಆಗ ಫಲಿತಾಂಶ ಸಿಗುತ್ತಿತ್ತು. ಆದರೆ ಈ ಬಾರಿ ಪರೀಕ್ಷೆಯೇ ನಡೆಸಿಲ್ಲವಾದ್ದರಿಂದ ರಿಜಿಸ್ಟರ್ ನಂಬರ್ ಸಿಕ್ಕಿಲ್ಲ.
ಫಲಿತಾಂಶದ ಸಲುವಾಗಿ ವಿದ್ಯಾರ್ಥಿಗಳಿಗೆ ಹೊಸದಾಗಿ ರಿಜಿಸ್ಟರ್ ನಂಬರ್ ಜನರೇಟ್ ಮಾಡಲು ಪಿಯು ಬೋರ್ಡ್ ವ್ಯವಸ್ಥೆ ಮಾಡಿದೆ. ಅದರಂತೆ ಬೋರ್ಡ್ ನೀಡಿದ ರಿಜಿಸ್ಟರ್ ನಂಬರ್(ಏಟಿoತಿ mಥಿ ಟಿumbeಡಿ)ನ್ನು ಪಿಯು ವೆಬ್ ಸೈಟ್ನಲ್ಲಿ ಹಾಕಿ ಆ ಮೂಲಕ ವಿದ್ಯಾರ್ಥಿಗಳು ಪರಿಶೀಲಿಸಬಹುದು. ವಿದ್ಯಾರ್ಥಿಗಳಿಗೆ ಎಸ್ ಎಂ ಎಸ್ ಹಾಗೂ ಆಯಾ ಕಾಲೇಜಿಗೆ ಈ ಕುರಿತು ಫಲಿತಾಂಶದ ಮಾಹಿತಿ ನೀಡಲಾಗುತ್ತದೆ.
ಫಲಿತಾಂಶಕ್ಕೂ ಮುನ್ನ ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ನ್ನು ಐಡೆಂಟಿಫೈ ಮಾಡಿಕೊಳ್ಳಬೇಕು. ಜನರೇಟ್ ಆದ ರಿಜಿಸ್ಟರ್ ನಂಬರ್ ಚೆಕ್ ಮಾಡಿ ಖಚಿತಪಡಿಸಿಕೊಳ್ಳಬೇಕು. ಆನಂತರ ಜು.20ರಂದು ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗುತ್ತದೆ


Share this Story:

Follow Webdunia kannada

ಮುಂದಿನ ಸುದ್ದಿ

ಕಾಣೆಯಾಗಿದ್ದ ಬೆಂಗಳೂರಿನ 1 ಲಕ್ಷ ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚಿದ ಪೋಲೀಸ್, ಬಿಬಿಎಂಪಿ ಈಗ ನಿರಾಳ !