Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಲಕ್ನೋ : ಉತ್ತರಪ್ರದೇಶದಲ್ಲಿ ಕೋವಿಡ್ ಹೆಚ್ಚಳವಾಗುತ್ತಿರುವ ನಡುವೆ ಸರ್ಕಾರ ಸಿಆರ್ಪಿಸಿ (ಕ್ರಿಮಿನಲ್ ಪ್ರೊಸಿಜರ್ ಕೋಡ್)-144 ನಿಷೇಧಾಜ್ಞೆ ಜಾರಿಗೊಳಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ 4 ಅಥವಾ ಅದಕ್ಕಿಂತಲೂ ಹೆಚ್ಚಿನವರು ಒಂದೇ ಸ್ಥಳದಲ್ಲಿ ಗುಂಪುಗೂಡದಂತೆ ಆದೇಶಿಸಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.
ಉತ್ತರಪ್ರದೇಶದ ಗೌತಮಬುದ್ಧನಗರ, ಗಾಜಿಯಾಬಾದ್, ಹಂಪುರ್, ಮೀರತ್, ಬುಲಾಂದ್ಶಹರ್, ಭಾಗ್ಪತ್ ಹಾಗೂ ಲಕ್ನೋ ಪ್ರದೇಶಗಳಲ್ಲಿ ಕೋವಿಡ್ ಹೆಚ್ಚಳವಾಗುತ್ತಿದೆ.
ಕಳೆದ 24 ಗಂಟೆಯಲ್ಲಿ ಗಾಜಿಯಾಬಾದ್ನಲ್ಲಿ 65, ಗೌತಮಬುದ್ಧನಗರದಲ್ಲಿ 20 ಹಾಗೂ ಲಕ್ನೋನಲ್ಲಿ 10 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 19 ವಿದ್ಯಾರ್ಥಿಗಳು ಇದ್ದಾರೆ ಎನ್ನಲಾಗಿದೆ.