Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

71ನೇ ವಸಂತಕ್ಕೆ ಕಾಲಿರಿಸಿದ ಪ್ರಧಾನಿ ಮೋದಿ; ಜನ್ಮದಿನದ ಪ್ರಯುಕ್ತ ಹಲವು ಕಾರ್ಯಕ್ರಮಗಳು!

71ನೇ ವಸಂತಕ್ಕೆ ಕಾಲಿರಿಸಿದ ಪ್ರಧಾನಿ ಮೋದಿ; ಜನ್ಮದಿನದ ಪ್ರಯುಕ್ತ ಹಲವು ಕಾರ್ಯಕ್ರಮಗಳು!
ನವದೆಹಲಿ , ಶುಕ್ರವಾರ, 17 ಸೆಪ್ಟಂಬರ್ 2021 (08:08 IST)
20 ದಿನಗಳ ಮೆಗಾ ಅಭಿಯಾನ 'ಸೇವಾ ಔರ್ ಸಮರ್ಪನ್ ಅಭಿಯಾನ' ಇಂದು (17 ಸೆಪ್ಟೆಂಬರ್) ಆರಂಭವಾಗಲಿದ್ದು, ಅಕ್ಟೋಬರ್ 7 ರಂದು ಮುಕ್ತಾಯಗೊಳ್ಳಲಿದೆ. ಏತನ್ಮಧ್ಯೆ, ಅಭಿಯಾನದ ಭಾಗವಾಗಿ ಉತ್ತರ ಪ್ರದೇಶದಲ್ಲಿಯೇ 27,000 ಬೂತ್ಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಜನ್ಮ ದಿನದ ಸಂಭ್ರಮ. ಇಂದಿಗೆ ಅವರು 71ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಮೂರು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ಎರಡನೇ ಬಾರಿಗೆ ಭಾರತದ ಪ್ರಧಾನಿ ಸ್ಥಾನ ಅಲಂಕರಿಸಿರುವ ಮೋದಿ ಅವರ ಜನ್ಮದಿನ ಸಂಭ್ರಮಾಚರಣೆಗೆ ಬಿಜೆಪಿ ಹಾಗೂ ಮೋದಿ ಅಭಿಮಾನಿಗಳು  ತುದಿಗಾಲಲ್ಲಿ ನಿಂತಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರ 71 ನೇ ಹುಟ್ಟುಹಬ್ಬವನ್ನು ಈ ಬಾರಿ ಬಿಜೆಪಿ ವಿಶೇಷವಾಗಿ ಆಚರಿಸುತ್ತಿದೆ. ಈ ವಿಶೇಷ ಸಂದರ್ಭವನ್ನು ಮತ್ತಷ್ಟು ವಿಶಿಷ್ಟಗೊಳಿಸುವ ಸಲುವಾಗಿ ಕಾಶಿಯಲ್ಲಿರುವ ವಾರಣಾಸಿಯ ಭಾರತ ಮಾತಾ ದೇವಸ್ಥಾನದಲ್ಲಿ 71,000 ದಿಯಾಗಳನ್ನು (ಮಣ್ಣಿನ ದೀಪಗಳನ್ನು) ಬೆಳಗಿಸಲಾಗುತ್ತದೆ. ದೀಪಗಳನ್ನು ಬೆಳಗಿಸುವುದರ ಜೊತೆಗೆ, ಭಾರತೀಯ ಜನತಾ ಪಕ್ಷವು (ಬಿಜೆಪಿ) 14 ಕೋಟಿ ಪಡಿತರ ಕಿಟ್ಗಳನ್ನು ವಿತರಿಸಲಿದೆ. ರಾಜ್ಯದಲ್ಲೂ ಮೋದಿ ಜನ್ಮ ದಿನದ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳ ಜೊತೆಗೆ ವಿಶೇಷ ಮಹಾ ಲಸಿಕೆ ಅಭಿಯಾನವನ್ನು ರಾಜ್ಯ ಸರ್ಕಾರ ಆಯೋಜಿಸಿದೆ.
ಪ್ರಧಾನಿ ಮೋದಿ ಅವರ ಫೋಟೋ ಇರುವ 5 ಕೋಟಿ ಪೋಸ್ಟ್ಕಾರ್ಡ್ಗಳನ್ನು ದೇಶಾದ್ಯಂತ ಅಂಚೆ ಕಚೇರಿಗಳಿಂದ ಮೇಲ್ ಮಾಡಲಾಗುತ್ತದೆ. ಈ ಬಾರಿ, ಬಿಜೆಪಿ ರಕ್ತದಾನ ಅಭಿಯಾನ, ನದಿಗಳ ಸ್ವಚ್ಛತಾ ಅಭಿಯಾನ, ಪಡಿತರ ಚೀಟಿಗಳ ವಿತರಣೆ ಮತ್ತು ಇನ್ನೂ ಹೆಚ್ಚಿನ ಚಟುವಟಿಕೆಗಳನ್ನು ಒಳಗೊಂಡಂತೆ ಮೋದಿ ಅವರ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸುತ್ತಿದೆ.
20 ದಿನಗಳ ಮೆಗಾ ಅಭಿಯಾನ 'ಸೇವಾ ಔರ್ ಸಮರ್ಪನ್ ಅಭಿಯಾನ' ಇಂದು (17 ಸೆಪ್ಟೆಂಬರ್) ಆರಂಭವಾಗಲಿದ್ದು, ಅಕ್ಟೋಬರ್ 7 ರಂದು ಮುಕ್ತಾಯಗೊಳ್ಳಲಿದೆ. ಏತನ್ಮಧ್ಯೆ, ಅಭಿಯಾನದ ಭಾಗವಾಗಿ ಉತ್ತರ ಪ್ರದೇಶದಲ್ಲಿಯೇ 27,000 ಬೂತ್ಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
ರಾಜ್ಯದಲ್ಲಿ ವಿಶೇಷ ಲಸಿಕೆ ಅಭಿಯಾನ
ಇಂದು ಪ್ರಧಾನಿ ಮೋದಿ ಅವರ ಜನ್ಮ ದಿನದ ಪ್ರಯುಕ್ತ ರಾಜ್ಯ ಸರ್ಕಾರ ಮಹಾ ಲಸಿಕಾ ಅಭಿಯಾನ ಹಮ್ಮಿಕೊಂಡಿದೆ. ರಾಜ್ಯದಲ್ಲಿ ಒಟ್ಟು 4.8 ಕೋಟಿ ಡೋಸ್ ಹಂಚಿಕೆಯಾಗಿದೆ. ರಾಜ್ಯದಲ್ಲಿ ಶೇ. 73 ರಷ್ಟು ಮೊದಲ ಡೋಸ್ ಹಾಗೂ ಶೇ. 27 ರಷ್ಟು ಎರಡನೇ ಡೋಸ್ ನೀಡಲಾಗಿದೆ. ಇಂದು ಲಸಿಕೆ ಅಭಿಯಾನಕ್ಕೆ 34 ಲಕ್ಷ ಡೋಸ್ ಮೀಸಲಿಡಲಾಗಿದೆ. ರಾಜ್ಯಾದ್ಯಂತ 12,700 ಸರ್ಕಾರಿ ಲಸಿಕಾ ಕೇಂದ್ರ, 300 ಖಾಸಗಿ ಕೇಂದ್ರಗಳು ಹಾಗೂ 14,666 ಲಸಿಕಾ ಕೇಂದ್ರದಲ್ಲಿ ಲಸಿಕೆ ಹಂಚಿಕೆ ಆಗಲಿದೆ.
ಬೆಂಗಳೂರಿನಲ್ಲಿ 5 ಲಕ್ಷ ಡೋಸ್ ಹಂಚಿಕೆ ಗುರಿ
ರಾಜಧಾನಿ ಬೆಂಗಳೂರಿನಲ್ಲಿ ವಿಶೇಷ ಮಹಾ ಲಸಿಕೆ ಅಭಿಯಾನ ನಡೆಯಲಿದೆ. ಐದು ಲಕ್ಷ ಲಸಿಕೆ ವಿತರಿಸುವ ಗುರಿ ಹಾಕಿಕೊಳ್ಳಲಾಗಿದೆ. ಈವರೆಗೆ ಪಾಲಿಕೆ ಒಂದು ಲಕ್ಷ ಮೂವತ್ತು ಸಾವಿರ ಗಡಿ ದಾಟಿ ಲಸಿಕೆ ಹಂಚಿದೆ. ಆದರೆ ಈ ಬಾರಿ ಅದಕ್ಕೂ ದೊಡ್ಡ ಗುರಿ ಇಟ್ಟುಕೊಂಡಿದೆ. ನಗರದ ಖಾಸಗಿ ಆಸ್ಪತ್ರೆ ಕೂಡ ದೊಡ್ಡ ಮಟ್ಟದಲ್ಲಿ ಲಸಿಕೆ ಹಂಚಲಿದೆ. ಇಂದು ನಗರದಾದ್ಯಂತ ಖಾಸಗಿ ಆಸ್ಪತ್ರೆ ಯಲ್ಲಿ ಬಿಬಿಎಂಪಿ ಬ್ಯಾನರ್ ನಲ್ಲಿ ಲಸಿಕೆ ನೀಡಲಿವೆ. ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಅಂದರೆ ಸತತ 12 ತಾಸು ಲಸಿಕೆ ಅಭಿಯಾನ ನಡೆಯಲಿದೆ. ಲಸಿಕೆ ಕೇಂದ್ರಗಳು ಒಟ್ಟಾರೆ ಕೋವ್ಯಾಕ್ಸಿನ್ - 1 ಲಕ್ಷ ಡೋಸ್ ಹಾಗೂ ಕೋವಿಶೀಲ್ಡ್ - 4 ಲಕ್ಷ ಡೋಸ್ ನೀಡಲಿವೆ. ಕಾರ್ಮಿಕರೇ ಇಂದಿನ ಲಸಿಕೆ ಅಭಿಯಾನದ ಟಾರ್ಗೆಟ್.
ಲಸಿಕೆ ಮಹಾ ಅಭಿಯಾನ ರಾಜ್ಯ ಸರ್ಕಾರದ ನಿರ್ಣಯ. ಈ ಹಿನ್ನೆಲೆ ಸರ್ಕಾರದ ನಿರ್ದೇಶನದ ಮೇರೆಗೆ ಈ ವಿಶೇಷ ಲಸಿಕಾ ಅಭಿಯಾನ ನಡೆಯಲಿದೆ. ಇದೇ ವೇಗದಲ್ಲಿ ಲಸಿಕೆ ಹಂಚಿಕೆಯಾದರೆ ಇಡೀ ಬೆಂಗಳೂರು ಲಸಿಕೆ ಪಡೆದುಕೊಳ್ಳಲಿದೆ. ಈಗಾಗಲೇ ಶೇ. 80 ಲಸಿಕೆ ಹಂಚಿಕೆಯಾಗಿದೆ. ಕೂಲಿ ಕಾರ್ಮಿಕರು, ವಲಸಿಗರು, ಆದ್ಯತೆ ಮೇರೆಗೆ ಬಂದು ಲಸಿಕೆ ಪಡೆದುಕೊಳ್ಳಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ ಅವರು ಮನವಿ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಧಿವೇಶನದ ಮುಗಿದ ಬಳಿಕ ಪ್ರವಾಹ ಸಂತ್ರಸ್ತರ ಪರಿಹಾರಕ್ಕೆ ಕ್ರಮ : ಬೊಮ್ಮಾಯಿ