Webdunia - Bharat's app for daily news and videos

Install App

ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಪ್ರಧಾನಿ ಮೋದಿ ಯತ್ನ

Webdunia
ಮಂಗಳವಾರ, 7 ಸೆಪ್ಟಂಬರ್ 2021 (11:56 IST)
ನವದೆಹಲಿ(ಸೆ.7): ಪ್ರಧಾನಿ ನರೇಂದ್ರ ಮೋದಿಯವರು ಇಂದು ವಿಡಿಯೋ ಕಾನ್ಫೆರೆನ್ಸ್ ಮೂಲಕ ‘ಶಿಕ್ಷಕ ಪರ್ವ‘ದ ಉದ್ಘಾಟನಾ ಸಮಾವೇಶದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಿ ಮೋದಿಯವರು ಇಂದು ಶಿಕ್ಷಣ ಕ್ಷೇತ್ರದಲ್ಲಿ ಹಲವು ಪ್ರಮುಖ ಉಪಕ್ರಮಗಳನ್ನು ಆರಂಭಿಸಲಿದ್ದಾರೆ.

ಇದೇ ವೇಳೆ  ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ರಾಷ್ಟ್ರ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು. ‘ಕೋವಿಡ್ ಬಿಕ್ಕಟ್ಟಿನ ನಡುವೆಯೂ ನೀವು ಕೆಲಸ ನಿರ್ವಹಿಸಿದ್ದೀರಿ. ನಿಮ್ಮ ಶ್ರಮ ಶ್ಲಾಘನೀಯ‘ ಎಂದು ನರೇಂದ್ರ ಮೋದಿ ಶಿಕ್ಷಕ್ ಪರ್ವ ಉದ್ಘಾಟನಾ ಸಮಾವೇಶದಲ್ಲಿ ಹೇಳಿದರು.
'ಶಿಕ್ಷಕ ಪರ್ವ -2021' ನ ಥೀಮ್ ಏನೆಂದರೆ, 'ಗುಣಮಟ್ಟ ಮತ್ತು ಸುಸ್ಥಿರ ಶಾಲೆಗಳು: ಭಾರತದ ಶಾಲೆಗಳಿಂದ ಕಲಿಕೆಗಳು' ಎಂಬುದಾಗಿದೆ. "ಇಂದು ಆರಂಭಿಸಿದ ಉಪಕ್ರಮಗಳು ಶಿಕ್ಷಣ ಕ್ಷೇತ್ರದ ಭವಿಷ್ಯವನ್ನು ರೂಪಿಸುತ್ತವೆ. ಒಂದು ಉಪಕ್ರಮ, ಶಾಲೆಯ ಗುಣಮಟ್ಟದ ಮೌಲ್ಯಮಾಪನ ಮತ್ತು ಭರವಸೆ ಶಿಕ್ಷಣವನ್ನು ಸ್ಪರ್ಧಾತ್ಮಕವಾಗಿಸುವುದು ಮಾತ್ರವಲ್ಲದೆ ವಿದ್ಯಾರ್ಥಿಗಳನ್ನು ಭವಿಷ್ಯಕ್ಕೆ ಸಿದ್ಧವಾಗಿಸುತ್ತದೆ" ಎಂದು ಹೇಳಿದರು.
ಇದೇ ವೇಳೆ ಪ್ರಧಾನಿ ಮೋದಿ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಾಗಿಯೂ ಮಾತನಾಡಿದರು. ಎನ್ಇಪಿ (NEP) ರಚನೆಯಿಂದ ಅನುಷ್ಠಾನದವರೆಗೆ, ಪ್ರತಿ ಹಂತದಲ್ಲೂ ಶಿಕ್ಷಣ ತಜ್ಞರು, ತಜ್ಞರು ಹಾಗೂ ಶಿಕ್ಷಕರ ಕೊಡುಗೆ ಪ್ರಶಂಸನೀಯವಾದುದು. ಈಗ ನಾವು ಈ ಭಾಗವಹಿಸುವಿಕೆಯನ್ನು ಹೊಸ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು. ನಾವು ಅದರಲ್ಲಿ ಸಮಾಜವನ್ನೂ ಕೂಡ ಒಳಗೊಳ್ಳುವಂತೆ ಮಾಡಬೇಕು ಎಂದರು.
ವಿದ್ಯಾಂಜಲಿ 2.0 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್' ನೊಂದಿಗೆ ದೇಶದ 'ಸಬ್ಕಾ ಪ್ರಯಾಸ'ದ ಸಂಕಲ್ಪಕ್ಕೆ ವೇದಿಕೆಯಾಗಲಿದೆ ಎಂದು ಹೇಳಿದರು. ಇದೇ ವೇಳೆ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಖಾಸಗಿ ವಲಯದವರು ಮುಂದಾಗಬೇಕು ಮತ್ತು ಕೊಡುಗೆ ನೀಡಬೇಕೆಂದು ಎಂದರು.
ನ್ಯಾಷನಲ್ ಡಿಜಿಟಲ್ ಎಜುಕೇಷನಲ್ ಆರ್ಕಿಟೆಕ್ಚರ್ (N-DEAR) ಶಿಕ್ಷಣದಲ್ಲಿನ ಅಸಮಾನತೆಯನ್ನು ಹೋಗಲಾಡಿಸುವ ಮೂಲಕ ಆಧುನಿಕವಾಗಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ಮೋದಿ ಹೇಳಿದರು, "ಯುಪಿಐ ಇಂಟರ್ಫೇಸ್ ಬ್ಯಾಂಕಿಂಗ್ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಿದಂತೆ, ಎನ್-ಡಿಯರ್ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳ ನಡುವೆ ಸೂಪರ್ ಕನೆಕ್ಟ್ ಆಗಿ ಕಾರ್ಯನಿರ್ವಹಿಸುತ್ತದೆ‘‘ ಎಂದು ತಿಳಿಸಿದರು.
ಮುಂದುವರೆದ ಅವರು, "ನಮ್ಮ ಶಿಕ್ಷಕರು ತಮ್ಮ ಕೆಲಸವನ್ನು ಕೇವಲ ವೃತ್ತಿಯಂತೆ ಪರಿಗಣಿಸುವುದಿಲ್ಲ, ಅವರಿಗೆ ಕಲಿಸುವುದು ಒಂದು ಮಾನವೀಯ ಭಾವನೆಯಾಗಿದೆ ಹಾಗೂ ಪವಿತ್ರ ನೈತಿಕ ಕರ್ತವ್ಯ. ಅದಕ್ಕಾಗಿಯೇ, ನಾವು ಶಿಕ್ಷಕ ಮತ್ತು ಮಕ್ಕಳ ನಡುವೆ ವೃತ್ತಿಪರ ಸಂಬಂಧವನ್ನು ನೋಡಿಲ್ಲ, ಅಲ್ಲಿ ಒಂದು ಕುಟುಂಬದ ಸಂಬಂಧವನ್ನು ಕಾಣುತ್ತೇವೆ.  ಈ ಸಂಬಂಧ, ಈ ಸಂಬಂಧವು ಕೇವಲ ಒಂದು ಘಳಿಗೆಗೆ ಅಲ್ಲ, ಇಡೀ ಜೀವನಕ್ಕಾಗಿ ಎಂದರು.
ಡಿಜಿಟಲ್ ಶಿಕ್ಷಣದ ಮೂಲಕ ದೇಶವು ಮುಂದುವರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. "ಮಾತನಾಡುವ ಪುಸ್ತಕಗಳು ಮತ್ತು ಆಡಿಯೋ ಪುಸ್ತಕಗಳಂತಹ ತಂತ್ರಜ್ಞಾನವನ್ನು ದೇಶವು ಶಿಕ್ಷಣದ ಒಂದು ಭಾಗವಾಗಿಸುತ್ತಿದೆ. ಶಿಕ್ಷಣವು ಕೇವಲ ಒಳಗೊಳ್ಳುವಿಕೆಯಾಗಿರದೆ ಸಮನಾಗಿರಬೇಕು" ಎಂದು ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments