Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮದ್ಯಪಾನ ತಡೆ ನೀತಿ ಜಾರಿಗೆ ತರಲು ಸುಪ್ರೀಂಕೋರ್ಟ್ ಗೆ ಮನವಿ!

ಮದ್ಯಪಾನ ತಡೆ ನೀತಿ ಜಾರಿಗೆ ತರಲು ಸುಪ್ರೀಂಕೋರ್ಟ್ ಗೆ ಮನವಿ!
ನವದೆಹಲಿ , ಬುಧವಾರ, 14 ಸೆಪ್ಟಂಬರ್ 2022 (09:02 IST)
ನವದೆಹಲಿ : ರಾಷ್ಟ್ರಮಟ್ಟದಲ್ಲಿ ಮದ್ಯಪಾನ ತಡೆ ನೀತಿಯನ್ನು  ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ಪೀಠ ವಿಚಾರಣೆಗೆ ನಿರಾಕರಿಸಿದೆ. ವಿನಿಯೋಗ್ ಪರಿವಾರ್ ಟ್ರಸ್ಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ, ಈ ಪ್ರಕರಣ ಆದಾಯದ ಅಂಶದಿಂದ ಕೂಡಿದೆ.

ಕೆಲವು ಸಂದರ್ಭಗಳಲ್ಲಿ ನಾವು ಸೂಚನೆಗಳನ್ನು ನೀಡಿದರೆ ಅದು ರಾಜ್ಯ ಸರ್ಕಾರದ ಆದಾಯವನ್ನು ನಿರ್ಬಂಧಿಸಿದಂತಾಗಲಿದೆ. ಈ ಆದಾಯವನ್ನು ಸರ್ಕಾರಗಳು ಸಾಮಾಜಿಕ ಉದ್ದೇಶಗಳಿಗಾಗಿ ಬಳಸಲಾಗುತ್ತಿವೆ.

ಎಲ್ಲದಕ್ಕಿಂತ ಮುಖ್ಯವಾಗಿ ಈ ಮನವಿಯು ಸರ್ಕಾರ ಹೊಸ ನೀತಿ ಹೊಂದಲು ನಿರ್ದೇಶಿಸುವಂತಿದೆ. ನೀತಿ ರೂಪಿಸಲು ಸೂಚಿಸುವುದು ನಮ್ಮ ವ್ಯಾಪ್ತಿ ಅಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಹೇಳಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತೆಯನ್ನು ಕಿಡ್ನ್ಯಾಪ್ ಮಾಡಿ ಅತ್ಯಾಚಾರವೆಸಗಿದ!