ನವದೆಹಲಿ : ಇಡೀ ದೇಶದಲ್ಲಿ ಭಾರಿ ಚರ್ಚೆಗೆ ಗುರಿಯಾಗಿದ್ದ ಪೆಗಸಸ್ ಸ್ಪೈವೇರ್ ಕೇಸ್ಗೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಲಿದೆ.
ಈ ಹಿಂದೆ ಹಲವರು ಪೆಗಸಸ್ ತನಿಖೆಯನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲೇ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ದೇಶದಾದ್ಯಂತ ರಾಜಕಾರಣಿಗಳು, ಸೆಲಿಬ್ರಿಟಿಗಳು, ಉದ್ಯಮಿಗಳು, ಜರ್ನಲಿಸ್ಟ್ಗಳು ಸೇರಿದಂತೆ ಸಾವಿರಾರು ಗಣ್ಯರ ಫೋನ್ಗಳನ್ನ ಟ್ಯಾಪ್ ಮಾಡಲಾಗಿದೆ ಎಂಬ ವರದಿಯನ್ನು ಅಂತಾರಾಷ್ಟ್ರೀಯ ಮಾಧ್ಯಮಗಳು ಹಾಗೂ ಸ್ವತಂತ್ರ ಮಾಧ್ಯಮಗಳು ಪ್ರಸಾರ ಮಾಡಿದ್ದವು, ಈ ಬೆನ್ನಲ್ಲೇ ಇದು ಕೇಂದ್ರ ಸರ್ಕಾರ ಪ್ರಾಯೋಜಿತ ಅಂತ ವಿಪಕ್ಷಗಳು ಆರೋಪಿಸಿದ್ದವು.