Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ವಿಧಾನಸಭೆ ಸರಿಯಾಗಿ ನಡೆಯಲಿಲ್ಲ. 5ದಿನ ಕಲಾಪ ವ್ಯರ್ಥ ಆಯಿತು.
ಆದರೆ ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರ ಸಂಬಳ ಮಾತ್ರ ಹೆಚ್ಚಾಗಬೇಕು. ಇವತ್ತು ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರ ಸಂಬಳ, ಭತ್ಯೆ ಹೆಚ್ಚಳ ಮಾಡಿಕೊಂಡಿದ್ದಾರೆ.
ವೇತನ ಹೆಚ್ಚಳದ ಮಸೂದೆ ಮಂಡಿಸಿ ಅಂಗೀಕಾರ ಪಡೆಯಲು ಸಚಿವ ಮಾಧುಸ್ವಾಮಿ ಬಿಲ್ ಬಗ್ಗೆ ಸಮರ್ಥನೆ ಮಾಡಿಕೊಂಡರು. ಕೋವಿಡ್ ಸಂದರ್ಭದಲ್ಲಿ ಬಹಳ ಕಷ್ಟ ಆಗಿದೆ. ಡಿಸೇಲ್, ಪೆಟ್ರೋಲ್ ಕೂಡ ಜಾಸ್ತಿ ಆಗಿದೆ. ಮನೆ ಬಾಡಿಗೆ ಕೂಡ ಜಾಸ್ತಿ ಆಗಿದೆ.
ಹಾಗಾಗಿ ಮುಖ್ಯಮಂತ್ರಿ, ಸಚಿವರು, ಸಭಾಧ್ಯಕ್ಷರು, ಉಪಸಭಾಧ್ಯಕ್ಷರು, ಶಾಸಕರ ಸಂಬಳ ಹೆಚ್ಚಳ ಮಾಡಲು ಬಿಲ್ ತಂದಿದ್ದೇವೆ. 50%ರಷ್ಟು ಹೆಚ್ಚಳಕ್ಕೆ ಬಿಲ್ ತಂದಿದ್ದೇವೆ ಎಂದು ಸ್ಪಷ್ಟಪಡಿಸಿದರು.