ಬೆಂಗಳೂರು : ನಗರದ ಜನತೆಗೆ ಬಿಬಿಎಂಪಿ ಗುಡ್ ನ್ಯೂಸ್ ನೀಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಉದ್ಯಾನಗಳು ರಾತ್ರಿ 8 ಗಂಟೆ ವರೆಗೂ ಓಪನ್ ಇರಲಿವೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಉದ್ಯಾನಗಳನ್ನು ಬೆಳಗ್ಗೆ 5 ರಿಂದ ರಾತ್ರಿ 8ರ ವರೆಗೆ ಸಾರ್ವಜನಿಕರ ಉಪಯೋಗಕ್ಕೆ ಅವಕಾಶ ಮಾಡಿಕೊಡುವ ಸಂಬಂಧ ಮುಖ್ಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ಉದ್ಯಾನಗಳನ್ನು ವಾಯು ವಿಹಾರಕ್ಕೆಂದು ಪ್ರತಿದಿನ ಬೆಳಗ್ಗೆ 5 ರಿಂದ 10ರ ವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 8ರ ವರೆಗೆ ಸಾರ್ವಜನಿಕರ ಉಪಯೋಗಕ್ಕಾಗಿ ಅವಕಾಶ ಕಲ್ಪಿಸಲಾಗಿತ್ತು. ಇನ್ಮುಂದೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲೆಂದು ಸಮಯವನ್ನು ಮಾರ್ಪಡಿಸಿ ಬೆಳಗ್ಗೆ 5 ರಿಂದ ರಾತ್ರಿ 8ರ ವರೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.
ಉದ್ಯಾನಗಳ ನಿರ್ವಹಣೆಗಾಗಿ ಬೆಳಗ್ಗೆ 10 ರಿಂದ ಮದ್ಯಾಹ್ನ 1.30ರ ವರೆಗೆ ಸಮಯವನ್ನು ನಿಗದಿಪಡಿಸಿ ಬಿಬಿಎಂಪಿ ಆದೇಶಿಸಿದೆ.