Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಜೆಟ್ ನಲ್ಲಿ ಬೂಸ್ಟರ್‌ ಡೋಸ್‌ ಬಗ್ಗೆ ಏನಿದೆ !

ಬಜೆಟ್ ನಲ್ಲಿ  ಬೂಸ್ಟರ್‌ ಡೋಸ್‌ ಬಗ್ಗೆ  ಏನಿದೆ !
ನವದೆಹಲಿ , ಭಾನುವಾರ, 6 ಫೆಬ್ರವರಿ 2022 (10:13 IST)
ನವದೆಹಲಿ : 2022-23ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಕೋವಿಡ್‌-19 ಲಸಿಕೆಗಾಗಿ ಕೇವಲ 5000 ಕೋಟಿ ರು. ಮೀಸಲಿಟ್ಟಿದೆ.
 
ಈ ಮೂಲಕ ದೇಶದ ಜನರು ಬೂಸ್ಟರ್‌ ಡೋಸ್‌ ಲಸಿಕೆಯನ್ನು ತಾವೇ ಹಣ ಕೊಟ್ಟು ಪಡೆದುಕೊಳ್ಳಬೇಕು ಎಂಬ ಸುಳಿವು ನೀಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

2021-22ನೇ ಸಾಲಿನ ಬಜೆಟ್‌ನಲ್ಲಿ ಲಸಿಕಾಕರಣಕ್ಕಾಗಿ 35,000 ಕೋಟಿ ಹಣ ಮೀಸಲಿಡಲಾಗಿತ್ತು. ಈ ವರ್ಷ ಅದನ್ನು .5000 ಕೋಟಿಗೆ ತಗ್ಗಿಸಲಾಗಿದೆ. ಈ ಮೂಲಕ ಕೇಂದ್ರವು ಎರಡು ಡೋಸ್‌ ಲಸಿಕಾಕರಣ ಪೂರ್ಣಗೊಳಿಸುವ ಉದ್ದೇಶ ಮಾತ್ರ ಹೊಂದಿದೆ ಎನ್ನಲಾಗಿದೆ.

ಈ ಹಿಂದೆ ಮೀಸಲಿಟ್ಟಹಣದಲ್ಲಿ 167 ಕೋಟಿ ಡೋಸ್‌ ಲಸಿಕೆ ವಿತರಣೆ ಮಾಡುವ ಮೂಲಕ ಈಗಾಗಲೇ 20,000 ಕೋಟಿ ರು. ಹಣ ವ್ಯಯ ಮಾಡಲಾಗಿದೆ. ಶೇ.95ರಷ್ಟುವಯಸ್ಕರಿಗೆ ಕನಿಷ್ಠ 1 ಡೋಸ್‌, ಶೇ.75ರಷ್ಟುಜನರಿಗೆ ಎರಡೂ ಡೋಸ್‌ ವಿತರಣೆ ಮಾಡಲಾಗಿದೆ ಎಂದು ಕಳೆದ ಸಂಸತ್‌ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ತಿಳಿಸಿತ್ತು.

ಈಗ ಬೂಸ್ಟರ್‌ ಡೋಸ್‌ ಆರಂಭಿಸಲಾಗಿದ್ದರೂ ಅದು ಆರೋಗ್ಯ ಸಿಬ್ಬಂದಿ, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಪೂರ್ವರೋಗ ಪೀಡಿತರಿಗೆ ಮಾತ್ರ ಸೀಮಿತವಾಗಿದೆ.

ಮುಂದೆ 15 ಅಥವಾ 18 ವರ್ಷ ಮೇಲ್ಪಟ್ಟಎಲ್ಲರಿಗೂ ಬೂಸ್ಟರ್‌ ಡೋಸ್‌ಗೆ ಅವಕಾಶ ನೀಡಿದರೆ, ಅದು ಉಚಿತವಾಗಿ ಇರುವುದಿಲ್ಲ ಎಂದು ವಿಶ್ಲೇಷಿಸಲಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಹಾಡು ಹಾಕಲು ಹೇಳಿದ್ದಕ್ಕೆ ಪಬ್ ನಲ್ಲಿ ಹಲ್ಲೆ ಮಾಡಿದ ಡಿಜೆ