ರಾಮನಗರ : ಮಾಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ ಬಾಲಕೃಷ್ಣ ಅವರು ಜೆಡಿಎಸ್ ಸ್ಟಾರ್ ಕ್ಯಾಂಪೇನರ್ ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ನೀಡಿರುವ ಹೇಳಿಕೆಗೆ ಇದೀಗ ನಿಖಿಲ್ ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ.
ಶುಕ್ರವಾರ ಶ್ಯಾನಭೋಗನಹಳ್ಳಿ ಗ್ರಾಮದಲ್ಲಿ ಪ್ರಚಾರ ನಡೆಸಿದ್ದ ಎಚ್.ಸಿ ಬಾಲಕೃಷ್ಣ ಅವರು,’ ಸಿನಿಮಾ ನಟರು ಬಂದು ನಾವು ಬೆನ್ನಿಗೆ ಚೂರಿ ಹಾಕ್ತಾರೆ ಅಂತಾ ಹೇಳ್ತಾರೆ. ಅವರು ಬಂದು ಕೇವಲ ಪ್ರಚಾರ ಮಾಡಿಕೊಂಡು ಮತ ಕೇಳಿಕೊಂಡು ಹೋಗಬೇಕು. ಅದನ್ನ ಬಿಟ್ಟು ಅವರೇನಾದರೂ ಮಾತನಾಡಿದರೆ, ನಮ್ಮ ಬಳಿ ಬೇಜಾನ್ ಕ್ಯಾಸೆಟ್‍ಗಳಿವೆ ನಾನು ಹೊರಗೆ ತೆಗೆಯುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಅವರ ವಿರುದ್ದ ವಾಗ್ದಾಳಿ ನಡೆಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ನಿಖಿಲ್ ಕುಮಾಸ್ವಾಮಿ ಅವರು,’ ಯಾವ ಕ್ಯಾಸೆಟ್‍ಗಳಿವೆ ತಾಕತ್ ಇದ್ದರೆ ಬಿಡುಗಡೆ ಮಾಡಲಿ ನಾನೇನ್ ಮಾಡಿದ್ದೀನಿ. ಅವರ ಯೋಗ್ಯತೆ ಏನು ಎಂದು ಆರೂವರೆ ಕೋಟಿ ಜನತೆ ಕಂಡಿದ್ದಾರೆ. ಯಾವ ರೀತಿ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ. ಈ ಚುನಾವಣೆ ಮುಗಿದ ಮೇಲೆ ಬಾಲಕೃಷ್ಣ ಅವರು ರಾಜಕೀಯದಿಂದ ನಿವೃತ್ತಿ ಹೊಂದಬೇಕಾಗುತ್ತದೆ. ಅದೇಗೆ ರಾಜಕೀಯ ಮಾಡುತ್ತಾರೆ ಎಂದು ನೋಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ