ಗಾಂಧಿನಗರ : ಓಮಿಕ್ರಾನ್ ಹೆಚ್ಚುತ್ತಿರುವ ಹಿನ್ನೆಲೆಯಿಂದಾಗಿ ಗುಜರಾತ್ ಸರ್ಕಾರವು ಅಲ್ಲಿನ ಎಂಟು ಪ್ರಮುಖ ನಗರಗಳಲ್ಲಿ ಡಿಸೆಂಬರ್ 31 ರವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಿದೆ
ಅಹಮದಾಬಾದ್, ಸೂರತ್, ಗಾಂಧಿನಗರ, ರಾಜ್ಕೋಟ್, ವಡೋದರಾ, ಭಾವ್ನಗರ, ಜಾಮ್ನಗರ್ ಮತ್ತು ಜುನಘಡ್ನಲ್ಲಿ ಡಿಸೆಂಬರ್ 32 ವರೆಗೆ ಬೆಳಗ್ಗೆ 1 ಗಂಟೆಯಿಂದ 5 ಗಂಟೆಯವರೆಗೆ ಕರ್ಫ್ಯೂ ವಿಸ್ತರಿಸಲಾಗಿದೆ.
ಸೋಮವಾರ ಗುಜರಾತ್ನಲ್ಲಿ 4 ಪ್ರಕರಣಗಳು ಪತ್ತೆಯಾಗಿದೆ. ಇಲ್ಲಿಯವರೆಗೆ ದೇಶದಲ್ಲಿ 161 ಮಂದಿಗೆ ಓಮಿಕ್ರಾನ್ ಬಂದಿದೆ. ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ನಾವು ಸಮಸ್ಯೆಗಳನ್ನು ಎದುರಿಸಿಲ್ಲ.
ನಾವು ಪ್ರಮುಖ ಔಷಧಿಗಳನ್ನು ದಾಸ್ತಾನು ಮಾಡಿ ಇಟ್ಟುಕೊಂಡಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.