Publish Date: Wed, 10 May 2023 (12:05 IST)
Updated Date: Wed, 10 May 2023 (12:32 IST)
ಚಿಕ್ಕಬಳ್ಳಾಪುರ : ಚುನಾವಣೆ ದಿನ ನಂದಿಗಿರಿಧಾಮ ಬಂದ್ ಮಾಡಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂಬ ದೃಷ್ಟಿಯಿಂದ ಮೇ 10 ರಂದು ಪ್ರವಾಸಿಗರಿಗೆ ನಿರ್ಬಂಧ ಹೇರಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ನಾಗರಾಜು ಆದೇಶ ಪ್ರಕಟಿಸಿದ್ದಾರೆ.
ಮೇ 10 ಬೆಳಿಗ್ಗೆ 5 ರಿಂದ ರಾತ್ರಿ 8 ಗಂಟೆಯವರೆಗೆ ಪ್ರವೇಶ ನಿಷೇಧಿಸಲಾಗಿದೆ. ಮೇ 10 ರಂದು ಆನ್ಲೈನ್ ಬುಕ್ಕಿಂಗ್ಗೂ ಸಹ ನಿರ್ಬಂಧ ವಿಧಿಸಲಾಗಿದೆ.
ಬುಧವಾರ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಆರು ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಸ್ಥಳೀಯರಲ್ಲದ ನಾಯಕರು ಕ್ಷೇತ್ರಗಳನ್ನು ತೊರೆದರೆ ರಾಷ್ಟ್ರೀಯ ಮುಖಂಡರು ರಾಜ್ಯವನ್ನು ತೊರೆದಿದ್ದಾರೆ.