ತನ್ನ ನೆಚ್ಚಿನ ನಾಯಕನ ಜಯಕ್ಕಾಗಿ ಮುಸ್ಲಿಂ ಸಮುದಾಯದ ಅಭಿಮಾನಿಯೊಬ್ಬ ಹಿಂದೂ ದೇವರಿಗೆ ಹರಕೆಯೊತ್ತ ವಿಶಿಷ್ಠ ಘಟನೆಯೊಂದು ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದಿದೆ.
ಗದಗ ಜಿಲ್ಲೆಯೂ ಕೋಮು ಸೌಹಾರ್ದತೆಗೆ ಹೆಸರಾಗಿರುವ ಜಿಲ್ಲೆ. ಅದಕ್ಕೆ ಪುಷ್ಟಿ ನೀಡುವಂತೆ ಇದೀಗ ಮತ್ತೊಂದು ಘಟನೆ ನಡೆದಿದೆ. ಗದಗ ಜಿಲ್ಲೆಯ ರೋಣ ಮತಕ್ಷೇತ್ರದ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಜಿ.ಎಸ್. ಪಾಟೀಲರ ಕಟ್ಟಾ ಅಭಿಮಾನಿಯಾಗಿರುವ ರೋಣ ಪಟ್ಟಣದ ಮುಸ್ಲಿಂ ಸಮುದಾಯದ ಯುವಕ ರಾಜಾಭಾಕ್ಷಿ ಬಿಲ್ಲುಖಾನ್ ಅವರೇ ಜಿ.ಎಸ್. ಪಾಟೀಲರು ಪುನಃ ಶಾಸಕರಾಗಿ ಆಯ್ಕೆಯಾಗಬೇಕೆಂದು ವೀರಭದ್ರೇಶ್ವರ ದೇವರಿಗೆ ಭಕ್ತಿಯಿಂದ ಬೇಡಿಕೊಂಡವನಾಗಿದ್ದಾನೆ.
ಇಂದು ಬೆಳಿಗ್ಗೆ ರೋಣ ಪಟ್ಟಣದಲ್ಲಿನ ವೀರಭದ್ರೇಶ್ವರ ದೇವಸ್ಥಾನದಿಂದ ಮಲೀಕ್ ದರ್ಗಾದವರೆಗೆ ಒಂದು ಕಿಲೋ ಮೀಟರ್ ವರೆಗೆ ಹಿಂದೂ ಸಂಪ್ರದಾಯದಂತೆ ದೇವರಿಗೆ ದೀಡ್ ನಮಸ್ಕಾರ ಹಾಕುವ ಮೂಲಕ ಹಿಂದೂ ಹಾಗೂ ಮುಸ್ಲಿಂ ದೇವರಿಗೆ ಈ ಭಾರೀಯೂ ರೋಣ ಶಾಸಕರಾಗಿ ಜಿ.ಎಸ್. ಪಾಟೀಲ ಆಯ್ಕೆಯಾಗುವಂತೆ ವಿನೂತನವಾಗಿ ಹರಕೆಯನ್ನು ಹೊತ್ತುಕೊಂಡಿದ್ದಾನೆ.