ನ್ಯೂಯಾರ್ಕ್ : ಟ್ವಿಟ್ಟರ್ ಶೀಘ್ರದಲ್ಲೇ 150 ಕೋಟಿ (1.5 ಬಿಲಿಯನ್) ಅಕೌಂಟ್ಗಳನ್ನು ಡಿಲೀಟ್ ಮಾಡಲಾಗುವುದು ಎಂದು ಸಿಇಒ ಎಲೋನ್ ಮಸ್ಕ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಟ್ಟಿಟ್ಟರ್ನಲ್ಲಿ ಖಾತೆ ತೆರೆದ ಮೇಲೆ ಯಾವುದೇ ಟ್ವೀಟ್ ಮಾಡದ ಹಾಗೂ ಲಾಗಿನ್ ಆಗದೇ ಇರುವ ಅಕೌಂಟ್ಗಳನ್ನು ಡಿಲೀಟ್ ಮಾಡಲಾಗುವುದು ಮಸ್ಕ್ ಸ್ಪಷ್ಟಪಡಿಸಿದ್ದಾರೆ.
ಟ್ಟಿಟ್ಟರ್, ನಿಮ್ಮ ನಿಜವಾದ ಖಾತೆಯ ಸ್ಥಿತಿಯನ್ನು ತೋರಿಸುವ ಸಾಫ್ಟ್ವೇರ್ ಅಪ್ಡೇಟ್ಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿದೆ. ಒಂದು ವೇಳೆ ನಿಮ್ಮ ಅಕೌಂಟ್ ನಿಷೇಧಕ್ಕೊಳಗಾದರೆ, ಏಕೆ ಮತ್ತು ಹೇಗೆ ಎಂಬುದನ್ನು ತಿಳಿಯಲು ಮೇಲ್ಮನವಿ ಸಲ್ಲಿಸಬೇಕು ಎಂದು ತಿಳಿಸಿದೆ.